ನನ್ನ ಹತ್ಯೆಯಾದ್ರೆ, ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಮತ್ತು ಅವರ ತಂಡ ಹೊಣೆ: ಹಿಂದೂ ಪರ ಹೋರಾಟಗಾರರ ಸತ್ಯಜೀತ್ ಸುರತ್ಕಲ್
ಒಂದು ವೇಳೆ ನನ್ನ ಹತ್ಯೆಯಾದ್ರೆ ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಮತ್ತು ಅವರ ತಂಡ ಹೊಣೆ ಎಂದು ಹಿಂದೂ ಪರ ಹೋರಾಟಗಾರರ ಮುಖಂಡ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಸುಮಾರು 16 ವರ್ಷಗಳಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದ್ದ ಕಾರಣಕ್ಕೋಸ್ಕರ ಸರಕಾರವೇ ನನಗೆ ಭದ್ರತೆ ನೀಡಿತ್ತು. 16 ವರ್ಷಗಳಿಂದ ಇದ್ದ ಸಿಬ್ಬಂದಿಯನ್ನು ಈಗ ಚುನಾವಣೆ ನೆಪದಲ್ಲಿ ವಾಪಸ್ ಪಡೆಯಲಾಗಿದೆ. ಈ ಮೂಲಕ ನನ್ನ ಹತ್ಯೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ.
ರಿವಾಲ್ವರ್ ಕೂಡ ತೆಗೆದಿಟ್ಟುಕೊಂಡಿದ್ದಾರೆ. ಈ ಬಗ್ಗೆ ಗೃಹ ಸಚಿವರು, ಸಂಘ ಪರಿವಾರದ ಪ್ರಮುಖರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ನಾನು ಹಿಂದುತ್ವಕ್ಕಾಗಿ ರಾಷ್ಟ್ರ ಹಿತಕ್ಕಾಗಿ ನಡೆಸಿದ ಕಾರ್ಯಗಳಿಂದಾಗಿ ಬೆದರಿಕೆ ಬಂದಿತ್ತೆ ಹೊರತು ನನ್ನ ವೈಯಕ್ತಿಕ ವಿಷಯಕ್ಕಾಗಿ ಅಲ್ಲ ಎಂದರು.
ಆಕಸ್ಮಾತ್ ದುಷ್ಕರ್ಮಿಗಳ ಕೈಗೆ ಸಿಕ್ಕಿ ನಾನಿ ಬಲಿ ಆದ್ರೆ ಅದಕ್ಕೆ ನೇರ ಕಾರಣ ರಾಜ್ಯಾಧ್ಯಕ್ಷ, ಆತನ ತಂಡ ಮತ್ತು ದುಡ್ಡು ಕೊಟ್ಟು ಗನ್ ಮ್ಯಾನ್ ಪಡೆದುಕೊಳ್ಳಿ ಎಂದು ಹೇಳಿದ ನಿರ್ಣಯ ಸಮಿತಿ ಹೊಣೆಯಾಗಿದೆ ಎಂದರು. ನನ್ನ ಹತ್ಯೆ ನಡೆದರೆ ಯಾರೂ ಕೂಡಾ ನನ್ನ ಶವ ದರ್ಶನಕ್ಕೆ ಬರಬಾರದು. ನನ್ನ ಮೆರವಣಿಗೆ ನಡೆಸಬಾರದು. ಅದೇನೇ ಆದರೂ ನಾವು ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿದ್ದೇವೆ. ಇಂದು ಹಿಂದುತ್ವದ ನೈಜ ಹೋರಾಟಗಾರರಿಗೆ ಇಂದು ಬೆಲೆ ಇಲ್ಲದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw