ದೇವಾಲಯದ ಉತ್ಸವಗಳು ಶಕ್ತಿ ಪ್ರದರ್ಶನ ಮಾಡುವ ಕೇಂದ್ರಗಳಾಗಿವೆ: ಯಾವುದೇ ಭಕ್ತಿ ಉಳಿದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬೇಸರ - Mahanayaka
2:12 PM Friday 20 - September 2024

ದೇವಾಲಯದ ಉತ್ಸವಗಳು ಶಕ್ತಿ ಪ್ರದರ್ಶನ ಮಾಡುವ ಕೇಂದ್ರಗಳಾಗಿವೆ: ಯಾವುದೇ ಭಕ್ತಿ ಉಳಿದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬೇಸರ

22/07/2023

ದೇಗುಲದ ಉತ್ಸವಗಳು ಶಕ್ತಿ ಪ್ರದರ್ಶನ ಮಾಡುವ ಕೇಂದ್ರಗಳಾಗಿ ಬದಲಾಗಿವೆ.ವ್ಇತ್ತೀಚೆಗೆ ಅಲ್ಲಿ ಯಾವುದೇ ಭಕ್ತಿ ಉಳಿದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ತಮಿಳುನಾಡಿನ ಶ್ರೀ ರುದ್ರ ಮಹಾ ಕಾಳಿಯಂ ದೇವಸ್ಥಾನದಲ್ಲಿ ಉತ್ಸವ ನಡೆಸಲು ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೋರಿ ಕೆ.ತಂಗರಸು ಎಂಬುವವರು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಪೀಠವು, ದೇವಳದ ಉತ್ಸವದ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
‘ದೇಗುಲಗಳು ಹಿಂಸಾಚಾರಗಳಿಗೆ ಕಾರಣವಾಗುತ್ತಿದ್ರೆ ಅಂತಹ ದೇವಾಲಯಗಳ ಅಸ್ತಿತ್ವಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಹಿಂಸೆಯನ್ನು ತಡೆಯಲು ಅಂತಹ ದೇವಾಲಯಗಳನ್ನು ಮುಚ್ಚುವುದು ಒಳ್ಳೆಯದು’ ಎಂದು ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
‘ಈ ಬಾರಿಯ ವಾರ್ಷಿಕ ಉತ್ಸವವನ್ನು ಜುಲೈ 23 ರಿಂದ ಆಗಸ್ಟ್ 1 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ರಕ್ಷಣೆ ಒದಗಿಸಬೇಕು’ ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಉತ್ಸವ ನಡೆಸುವ ಬಗ್ಗೆ ಎರಡು ಗುಂಪುಗಳಿಗೆ ವೈರತ್ವ ಇದೆ. ಶಾಂತಿ ಸಮಿತಿ ಸಭೆ ಕರೆದರೂ ವಿವಾದ ಇತ್ಯರ್ಥವಾಗಲಿಲ್ಲ. ದೇವಸ್ಥಾನದೊಳಗೆ ವಿನಾಯಕನ ವಿಗ್ರಹವನ್ನು ಯಾರು ಪ್ರತಿಷ್ಠಾಪಿಸಬೇಕು ಎಂಬ ವಿಚಾರದಲ್ಲೂ ವಿವಾದ ಇದೆ, ಹೀಗಿರುವಾಗ ಉತ್ಸವ ನಡೆಸಲು ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…


Provided by

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ