ಕ್ರಿಕೆಟ್‌ʼನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ‌ ವಿಶ್ವಕಪ್ ಗೆಲ್ಲುತ್ತಿತ್ತು: ನಟ ಚೇತನ್ - Mahanayaka

ಕ್ರಿಕೆಟ್‌ʼನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ‌ ವಿಶ್ವಕಪ್ ಗೆಲ್ಲುತ್ತಿತ್ತು: ನಟ ಚೇತನ್

chethan
20/11/2023

ಬೆಂಗಳೂರು: ಭಾರತಕ್ಕೆ ಕ್ರಿಕೆಟ್‌ʼನಲ್ಲಿ ಮೀಸಲಾತಿ  ಇದ್ದಿದ್ದರೇ ಟೀಂ ಇಂಡಿಯಾ ಸುಲಭವಾಗಿ ಈ ವಿಶ್ವಕಪ್‌ ಗೆಲ್ಲುತ್ತಿತ್ತು ಎಂದು ನಟ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಪುನರುಚ್ಛರಿಸಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ.  ಈ ಸೋಲಿನ ಬಳಿಕ  ಸಾಕಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

ಈ ಹಿಂದೆಯೇ ಕ್ರಿಕೆಟ್‌ ನಲ್ಲಿ ಮೀಸಲಾತಿ ಇರಬೇಕು ಎಂದು ನಟ ಚೇತನ್‌ ಒತ್ತಾಯಿಸಿದ್ದರು. ಇದೀಗ ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ  ಇದ್ದಿದ್ದರೇ ಟೀಂ ಇಂಡಿಯಾ ಸುಲಭವಾಗಿ ಈ ವಿಶ್ವಕಪ್‌ ಗೆಲ್ಲುತ್ತಿತ್ತು ಎಂದು ಪುನರುಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ