ಬಿಸಿನೀರು ಕುಡಿದ್ರೆ ದೇಹದ ತೂಕ ಇಳಿಯಲ್ಲ ಎಂದ ಖ್ಯಾತ ನ್ಯೂಟ್ರಿಷನ್!

ಬಿಸಿನೀರು ಕುಡಿದರೆ ದೇಹದ ತೂಕ ಇಳಿಯುತ್ತದೆ. ಕ್ಯಾಲೋರಿ ಕಡಿಮೆಯಾಗುತ್ತದೆ, ದಪ್ಪಗಿದ್ದವರು ತೆಳ್ಳಗಾಗುತ್ತಾರೆ ಎಂಬೆಲ್ಲಾ ಪ್ರಚಾರ ಸಾರ್ವಜನಿಕವಾಗಿ ಇದೆ. ಜೀರಿಗೆ, ಲಿಂಬೆ, ಪುದಿನ, ಜೇನುತುಪ್ಪ ಇತ್ಯಾದಿಗಳನ್ನು ಬಿಸಿನೀರಿಗೆ ಬೆರೆಸಿ ಕುಡಿದರೆ ದೇಹ ತೂಕ ಕಡಿಮೆಯಾಗುತ್ತದೆ ಎಂದು ಹೇಳುವವರಿದ್ದಾರೆ. ಆದರೆ ಇದು ನಿಜವಲ್ಲ ಎಂದು ಖ್ಯಾತ ನ್ಯೂಟ್ರಿಷನ್ ಅಮಿತ್ ಗಾದ್ರೆ ಹೇಳಿದ್ದಾರೆ.
ಬಿಸಿ ನೀರಿನಲ್ಲಿ ಶರೀರವನ್ನು ತೆಳ್ಳಗೆ ಮಾಡುವ ಯಾವುದೇ ಅಂಶ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕುವುದಕ್ಕೆ ಮತ್ತು ಪಚನ ಕ್ರಿಯೆಯನ್ನು ಸುಗಮಗೊಳಿಸುವುದಕ್ಕೆ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ ದಪ್ಪವನ್ನು ಕರಗಿಸುವುದಕ್ಕೆ ಬೇರೆ ದಾರಿಗಳಿವೆ. ಕ್ಯಾಲೋರಿಯನ್ನು ಕಡಿಮೆಗೊಳಿಸುವುದೇ ದಪ್ಪವನ್ನು ಕಡಿಮೆಗೊಳಿಸುವುದಕ್ಕೆ ಒಳ್ಳೆಯ ಮಾರ್ಗ. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಬೇಕು ಮುಖ್ಯವಾಗಿ ಆಹಾರ ಸೇವಿಸುವುದಕ್ಕಿಂತ ಮೊದಲು ಒಂದು ಗ್ಲಾಸ್ ನೀರು ಸೇವಿಸುವುದರಿಂದ ಆಹಾರದ ಪ್ರಮಾಣವನ್ನು ಅದು ಕಡಿಮೆಗೊಳಿಸುತ್ತದೆ ಹೀಗೆ ಆಹಾರದ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ನಮ್ಮ ದೇಹವನ್ನು ತೆಳುವಾಗಿಸಲು ಸಹಾಯಕವಾಗುತ್ತದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj