ಹೊಸ ಯೋಜನೆ: 61 ರಾಷ್ಟ್ರಗಳ 10 ಲಕ್ಷಕ್ಕಿಂತ ಅಧಿಕ ಮಂದಿಗೆ ಇಫ್ತಾರ್ ಮಾಡುವ ಕಾರ್ಯಕ್ರಮ

ಖಾದಿಮುಲ್ ಹರಮೈನ್ ಇಫ್ತಾರ್ ಯೋಜನೆಯ ಅಡಿಯಲ್ಲಿ ಈ ವರ್ಷ 61 ರಾಷ್ಟ್ರಗಳ 10 ಲಕ್ಷಕ್ಕಿಂತ ಅಧಿಕ ಮಂದಿಗೆ ಇಫ್ತಾರ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ರಾಜ್ಯಗಳ ರಾಯಭಾರಿಗಳ ನೆರವಿನೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ಸೌದಿ ದೊರೆ ಸಲ್ಮಾನ್ ಅವರ ಖರ್ಚಿನಲ್ಲಿ ಈ ಇಫ್ತಾರ್ ನಡೆಯಲಿದೆ.
ಇಫ್ತಾರ್ ಬಹಳ ಪುಣ್ಯ ಕರ್ಮವಾಗಿದ್ದು ಉಪವಾಸಿಗರನ್ನು ಒಂದೇ ಕಡೆ ಸೇರಿಸುವುದು ಮತ್ತು ಜೊತೆಯಾಗಿ ಉಪವಾಸ ಆಚರಿಸುವ ಮೂಲಕ ಯಾವುದೇ ತಾರತಮ್ಯವಿಲ್ಲದ ಸಾಮುದಾಯಿಕ ಭಾವನೆಯನ್ನು ತರುವುದು ಈ ಇಫ್ತಾರ್ ನ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.
ಸೌದಿ ಅರೇಬಿಯಾ ಪ್ರತಿ ವರ್ಷ ಇಂತಹ ಇಫ್ತಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮಾತ್ರ ಅಲ್ಲ ಲಕ್ಷಾಂತರ ಮಂದಿ ಇಂತಹ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸೌದಿ ಅರೇಬಿಯಾದ ಮಸೀದಿಗಳು ಪ್ರತಿದಿನ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸುತ್ತವೆ ಮತ್ತು ಅಸಂಖ್ಯ ಮಂದಿ ಇಫ್ತಾರ್ ನಿಂದ ಪ್ರಯೋಜನ ಪಡೆಯುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj