ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಇಫ್ತಾರ್ ಕೂಟ

ಕೊಟ್ಟಿಗೆಹಾರ: ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ಕೊಟ್ಟಿಗೆಹಾರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಪ್ರತಿ ದಿನಾ ಸಂಜೆ ಇಫ್ತಾರ್ ಕೂಟ ನಡೆಯುತ್ತದೆ.
ಪ್ರತಿ ಒಂದು ಮನೆಯಿಂದ ಒಂದು ದಿನಾ ಹತ್ತಾರು ಬಗೆಯ ವಿಶೇಷ ತರಹ ತಿಂಡಿ, ತಂಪು ಪಾನಿಯ ಪದಾರ್ಥಗಳು ತಂದು ಮಸೀದಿ ಯಲ್ಲಿ ಎಲ್ಲರೂ ಒಟ್ಟಾಗಿ ಉಪವಾಸ ಬಿಡುತ್ತಾರೆ. ಕೊಟ್ಟಿಗೆಹಾರ ಒಂದು ಪ್ರವಾಸಿಗರ ಕೇಂದ್ರ ಬಿಂದುವಾದ್ದರಿಂದ ಮುಸ್ಲಿಂ ಪ್ರವಾಸಿಗರು ಹೆಚ್ಚಾಗಿ ಈ ಮಸೀದಿಯಲ್ಲಿ ಉಪವಾಸ ಬಿಡಲು ಹಾಜರಿರುತ್ತಾರೆ. ಪುಟಾಣಿ ಮಕ್ಕಳಿಂದ ಹಿಡಿದು ಎಲ್ಲರೂ ಒಟ್ಟಾಗಿ ಸೇರಿ ಈ ಉಪವಾಸ ಬಿಡುವ ಕಾರ್ಯಕ್ರಮದಲ್ಲಿ ಅದೇನೋ ಒಂತರಹ ಖುಷಿ.
ಈ ಇಫ್ತಾರ್ ಕೂಟದಲ್ಲಿ ಮಸೀದಿಯಾ ಧರ್ಮ ಗುರುಗಳು, ಅಧ್ಯಕ್ಷರು, ಕಾರ್ಯದರ್ಶಿಗಳು,ಕಮಿಟಿಯ ಎಲ್ಲಾ ಸದಸ್ಯರು, ಮಕ್ಕಳು, ಪ್ರವಾಸಿ ಮುಸ್ಲಿಂ ಬಾಂದವರು ಇರುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: