ಮನಮೋಹನ್ ಸಿಂಗ್ ರಿಗೆ ಅಗೌರವ ಆರೋಪ: ಹೊಸ ಕಚೇರಿಗೆ ಇಂದಿರಾ ಭವನ ಎಂದು ನಾಮಕರಣ ಮಾಡಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಿರ್ಲಕ್ಷಿಸಿದ್ದಕ್ಕಾಗಿ ಮತ್ತು ಹೊಸ ಪ್ರಧಾನ ಕಚೇರಿಗೆ ಇಂದಿರಾ ಗಾಂಧಿ ಅವರ ಹೆಸರನ್ನು ಇಟ್ಟಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಸುಮಾರು ಐದು ದಶಕಗಳಿಂದ ತನ್ನ ಮನೆಯಾಗಿದ್ದ ಅಕ್ಬರ್ ರಸ್ತೆಯ 24 ರಿಂದ ಕೋಟ್ಲಾ ರಸ್ತೆಯಲ್ಲಿರುವ ತನ್ನ ಹೊಸ ಪ್ರಧಾನ ಕಚೇರಿಗೆ ಕಾಂಗ್ರೆಸ್ ಸ್ಥಳಾಂತರಗೊಂಡಾಗ ರಾಜಕೀಯ ಕೆಸರೆರಚಾಟ ಭುಗಿಲೆದ್ದಿದೆ.
ಹೊಸ ಕಟ್ಟಡದ ಉದ್ಘಾಟನೆಗೆ ಮುಂಚಿತವಾಗಿ ಹೊಸ ಪ್ರಧಾನ ಕಚೇರಿಯ ಹೊರಗೆ ‘ಸರ್ದಾರ್ ಮನಮೋಹನ್ ಸಿಂಗ್ ಭವನ’ ಎಂದು ಹೆಸರಿಸಬೇಕೆಂದು ಒತ್ತಾಯಿಸಿ ಪೋಸ್ಟರ್ ಗಳು ಕಂಡುಬಂದವು.
ಮನಮೋಹನ್ ಸಿಂಗ್ ಅವರ ಸಮ್ಮಾನ್ ವಿಚಾರದಲ್ಲಿ ಕಾಂಗ್ರೆಸ್ ಕೊಳಕು ರಾಜಕೀಯ ಮಾಡಿದೆ. ಅಲ್ಲದೇ ಈಗ ತಮ್ಮ ಹೊಸ ಪ್ರಧಾನ ಕಚೇರಿಗೆ ಡಾ.ಸಿಂಗ್ ಅವರ ಹೆಸರನ್ನು ಇಡಬೇಕೆಂದು ಭಾರಿ ಬೇಡಿಕೆಯನ್ನು ಅವರು ನಿರ್ಲಕ್ಷ್ಯ ಮಾಡಿ ಅದಕ್ಕೆ ಇಂದಿರಾ ಗಾಂಧಿ ಅವರ ಹೆಸರನ್ನು ಇಟ್ಟಿದ್ದಾರೆ. ಸಿಖ್ ಸಮುದಾಯವನ್ನು ನಿಂದಿಸುವ ಮತ್ತು ಅವಮಾನಿಸುವ ನಾಚಿಕೆಗೇಡಿನ ಮನಸ್ಥಿತಿ ಮತ್ತೆ ಬಹಿರಂಗಗೊಂಡಿದೆ. ನರಸಿಂಹ ರಾವ್ ಜಿ, ಅಂಬೇಡ್ಕರ್ ಜಿ, ಪ್ರಣಬ್ ದಾ ಮತ್ತು ಎಲ್ಲ ಘಟಾನುಘಟಿ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj