ಬೆಳ್ತಂಗಡಿ: ಇಳಂತಿಲದಲ್ಲಿ 5 ಗ್ರೆನೇಡ್ ಪತ್ತೆ | ನಿವೃತ್ತ ಸೈನಿಕರಿಂದ ದೂರು
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ಐದು ಗ್ರೆನೇಡ್ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಜಯಕುಮಾರ್ ಪೂಜಾರಿ ಎಂಬವರು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಯ ಕುಮಾರ್ ಅವರು ನವೆಂಬರ್ 6ರಂದು(ನಿನ್ನೆ) ಸಂಜೆ ಉಪ್ಪಿನಂಗಡಿಯಿಂದ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಳಿಜಾರಿನ ತಂತಿ ಬೇಲಿಯ ಎಡಭಾಗದಲ್ಲಿ ಗ್ರೆನೇಡ್ ರೀತಿಯ ಐದು ವಸ್ತುಗಳನ್ನು ನೋಡಿದ್ದು, ಈ ಪೈಕಿ ಒಂದು ಗ್ರೆನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್ ಒಳಗೆ ಇದ್ದು, ಉಳಿದ ನಾಲ್ಕು ಗ್ರೆನೇಡ್ ಗಳು ಹರಡಿಕೊಂಡಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಯಕುಮಾರ್ ಅವರು ಭೂಸೇನೆಯಲ್ಲಿ ಎಸ್ ಸಿಒ ಆಗಿ ನಿವೃತ್ತರಾಗಿದ್ದು, ಹೀಗಾಗಿ ಅವರು ಗ್ರೆನೇಡ್ ಬಗ್ಗೆ ಜ್ಞಾನ ಉಳ್ಳವರಾಗಿದ್ದಾರೆ. ಈ ಗ್ರೆನೇಡ್ ನ್ನು ಕಾಡು ಪ್ರಾಣಿಗಳು ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯ ಉಂಟಾಗಬಹುದು ಎನ್ನುವ ಕಾರಣಕ್ಕೆ ಅವರು ಮನೆಯಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka