ನನಗೆ ಅನಾರೋಗ್ಯವಿದೆ, ನಾನು ಸುಳ್ಳು ಹೇಳಲ್ಲ: ನಟ ಶಿವರಾಜ್ ಕುಮಾರ್ - Mahanayaka
5:26 PM Thursday 26 - December 2024

ನನಗೆ ಅನಾರೋಗ್ಯವಿದೆ, ನಾನು ಸುಳ್ಳು ಹೇಳಲ್ಲ: ನಟ ಶಿವರಾಜ್ ಕುಮಾರ್

shivaraj kumar
07/11/2024

ಬೆಂಗಳೂರು: ನನಗೆ ಅನಾರೋಗ್ಯವಿದೆ,  ಸರ್ಜರಿ ಮಾಡಿಸಬೇಕಿದೆ ಎಂದು ನಟ ಶಿವರಾಜ್ ಕುಮಾರ್ ಅವರು ತಮ್ಮ ಅನಾರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನಾನೂ ಮನುಷ್ಯನೇ. ಟ್ರೀಟ್ ​ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ.  ಟ್ರೀಟ್ ​ಮೆಂಟ್ ​ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ  ಎಂದು ಅವರು ಹೇಳಿದರು.

ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ. ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್​ ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ ಎಂದು ಶಿವರಾಜ್ ಕುಮಾರ್ ಹೇಳಿದರು.

ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ  ಎಂದು ಅವರು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ