ಸದ್ದು ಮಾಡುತ್ತಿದೆ ಛತ್ತೀಸ್ ಗಢ ವಿಧಾನಸಭಾ ಚುನಾವಣಾ ಕಣ: ಬಿಜೆಪಿ ಸಿಎಂ ಅಭ್ಯರ್ಥಿ ಎದುರು ತೃತೀಯ ಲಿಂಗಿಯನ್ನು‌ ಕಣಕ್ಕಿಳಿಸಿದ ಕಾಂಗ್ರೆಸ್ - Mahanayaka

ಸದ್ದು ಮಾಡುತ್ತಿದೆ ಛತ್ತೀಸ್ ಗಢ ವಿಧಾನಸಭಾ ಚುನಾವಣಾ ಕಣ: ಬಿಜೆಪಿ ಸಿಎಂ ಅಭ್ಯರ್ಥಿ ಎದುರು ತೃತೀಯ ಲಿಂಗಿಯನ್ನು‌ ಕಣಕ್ಕಿಳಿಸಿದ ಕಾಂಗ್ರೆಸ್

14/11/2023

ಛತ್ತೀಸ್ ಗಢದ ರಾಯ್ ಗಢ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಚುನಾವಣಾ ಸ್ಪರ್ಧೆಯು ಸಾಮಾನ್ಯವಾಗಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ಸ್ಪರ್ಧೆ ಇರುತ್ತದೆ. ಅದರಲ್ಲಿ ಈ ಬಾರಿ ತೃತೀಯ ಲಿಂಗಿ ಅಭ್ಯರ್ಥಿಯ ಚೊಚ್ಚಲ ಪ್ರವೇಶದೊಂದಿಗೆ ಈ ಚುನಾವಣೆ ಕುತೂಹಲ ಪಡೆದಿದೆ. ಛತ್ತೀಸ್ ಗಢದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಅಭ್ಯರ್ಥಿಯೊಬ್ಬರು ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. ತೃತೀಯ ಲಿಂಗಿ ಅಭ್ಯರ್ಥಿ ಮಧು ಬಾಯಿ ಅವರನ್ನು ರಾಯ್ ಗಢ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಮಧು ಬಾಯಿ ತನ್ನ ಇಡೀ ತಂಡದೊಂದಿಗೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರು ಹಾಡುಗಾರಿಕೆ, ನೃತ್ಯ ಮತ್ತು ಇತರ ವಿಶಿಷ್ಟ ವಿಧಾನಗಳನ್ನು ಬಳಸಿದ್ದಾರೆ. ಇವರ ಪ್ರಚಾರವು ಇತರ ಪಕ್ಷಗಳಿಗಿಂತ ವಿಭಿನ್ನವಾಗಿದೆ.

ಮಧುಬಾಯಿ ಚುನಾವಣಾ ಹೋರಾಟಕ್ಕೆ ಹೊಸಬರಲ್ಲ. 2014ರಲ್ಲಿ ರಾಯ್ ಗಢದ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಛತ್ತೀಸ್ ಗದ ಮೊದಲ ತೃತೀಯ ಲಿಂಗಿ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಭಿಲಾಯ್ ನಲ್ಲಿ ಕಾಂಗ್ರೆಸ್ ಪರ ಪ್ರಚಾರ ಪ್ರಯತ್ನಗಳನ್ನು ಗಮನಿಸಿದರೆ, ಈ ಚುನಾವಣೆಯಲ್ಲಿ ಅವರು ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾಸ ಹೊಂದಿದ್ದಾರೆ.

ಮಧು ಬಾಯಿ ಅವರ ಚುನಾವಣಾ ಸ್ಪರ್ಧೆ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಬಿಜೆಪಿ ಪಾಳಯದಿಂದ ಪಕ್ಷವು ರಾಯ್ ಗಢದ ಮಾಜಿ ಕಲೆಕ್ಟರ್ ಒಪಿ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಛತ್ತೀಸ್ ಗಢದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಒಪಿ ಚೌಧರಿ ಅವರನ್ನು ಬಿಜೆಪಿ ಸ್ಪರ್ಧಿಯಾಗಿ ನೋಡುತ್ತಿದ್ದರೆ, ಅವರು ತೃತೀಯ ಲಿಂಗಿ ಅಭ್ಯರ್ಥಿ ಮಧು ಬಾಯಿ ಬಗ್ಗೆ ಯಾವುದೇ ರೀತಿಯ ಟೀಕೆ ಮಾಡಿಲ್ಲ.

ಛತ್ತೀಸ್ ಗಢದ ರಾಜಕೀಯದಲ್ಲಿ ಯಾವುದೇ ರಾಜಕೀಯ ಪಕ್ಷವು ತೃತೀಯ ಲಿಂಗಿ ವ್ಯಕ್ತಿಯನ್ನು ತಮ್ಮ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದ್ದು ಇದೇ ಮೊದಲು. ಆದಾಗ್ಯೂ, ರಾಷ್ಟ್ರೀಯ ಸನ್ನಿವೇಶವನ್ನು ನೋಡಿದರೆ, ಶಬ್ನಮ್ ಮೌಸಿ 2000 ರಲ್ಲಿ ಮಧ್ಯಪ್ರದೇಶದ ಸೊಹಾಗ್ಪುರ ವಿಧಾನಸಭಾ ಸ್ಥಾನದಿಂದ ಉಪಚುನಾವಣೆಯಲ್ಲಿ ಗೆದ್ದಿದ್ದರು. ಈ ಮೂಲಕ ದೇಶದ ಮೊದಲ ತೃತೀಯ ಲಿಂಗಿ ಶಾಸಕರಾದರು. ವಿಧಾನಸಭಾ ಚುನಾವಣೆಯಲ್ಲಿ ತೃತೀಯ ಲಿಂಗಿ ವ್ಯಕ್ತಿಯು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿರುವ ದೇಶದ ಎರಡನೇ ರಾಜ್ಯ ಇದಾಗಿದೆ.




ಇತ್ತೀಚಿನ ಸುದ್ದಿ