ಇಂಗ್ಲೆಂಡ್ ಮತ್ತು ವೆಲ್ಸ್ ಗಳಲ್ಲಿ ನವಜಾತ ಶಿಶುಗಳಿಗೆ ಇಟ್ಟ ಹೆಸರುಗಳಲ್ಲಿ ಮುಹಮ್ಮದ್ ಎಂಬ ಹೆಸರಿಗೆ ಮೊದಲ ಸ್ಥಾನ
2023ರಲ್ಲಿ ಇಂಗ್ಲೆಂಡ್ ಮತ್ತು ವೆಲ್ಸ್ ಗಳಲ್ಲಿ ನವಜಾತ ಶಿಶುಗಳಿಗೆ ಇಟ್ಟ ಹೆಸರುಗಳಲ್ಲಿ ಮುಹಮ್ಮದ್ ಎಂಬ ಹೆಸರು ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆಗೊಳಿಸಿದ ವರದಿಯನ್ನು ಉಲ್ಲೇಖಿಸಿ ಬ್ರಿಟಿಷ್ ದಿನಪತ್ರಿಕೆಯಾದ ದಿ ಗಾರ್ಡಿಯನ್ ವರದಿ ಮಾಡಿದೆ.
2016ರಲ್ಲಿ ಮುಹಮ್ಮದ್ ಎಂಬ ಹೆಸರು ಮೊದಲ 10 ಜನಪ್ರಿಯ ಹೆಸರುಗಳಲ್ಲಿ ಒಂದಾಗಿತ್ತು. 2022 ರಲ್ಲಿ ಮುಹಮ್ಮದ್ ಎಂಬ ಹೆಸರು ಎರಡನೇ ಸ್ಥಾನವನ್ನ ಪಡೆದುಕೊಂಡಿತ್ತು. ನೂಹ್ ಎಂಬುದು ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. 2023ರಲ್ಲಿ ನೂಹ್ ಎಂಬ ಹೆಸರು ಎರಡನೇ ಸ್ಥಾನಕ್ಕೆ ಜಾರಿದೆ. ಒಲಿವರ್ ಎಂಬುದು ಮೂರನೇ ಸ್ಥಾನವನ್ನು ಪಡೆದಿದೆ.
ಹೆಣ್ಣು ಮಕ್ಕಳಲ್ಲಿ ಒಲಿವಿಯ ಎಂಬ ಹೆಸರು ಮೊದಲ ಸ್ಥಾನವನ್ನು ಪಡೆದಿದೆ. ಆಮೆಲಿಯ ಮತ್ತು ಇಸ್ಲಾ ಎಂಬ ಹೆಸರುಗಳು ಜನಪ್ರಿಯತೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿವೆ.
2024 ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ 4661 ನವಜಾತ ಶಿಶುಗಳಿಗೆ ಮುಹಮ್ಮದ್ ಎಂಬ ಹೆಸರನ್ನು ಇಡಲಾಗಿದೆ. 2022 ರಲ್ಲಿ 4,177 ನವಜಾತ ಶಿಶುಗಳಿಗೆ ಮುಹಮ್ಮದ್ ಎಂಬ ಹೆಸರನ್ನು ಇಡಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj