ಪ್ರವಾದಿ ವಿರುದ್ಧ ಹೇಳಿಕೆ: ಭಾರತದ ಉತ್ಪನ್ನಗಳನ್ನು ತೆಗೆದು ಹಾಕಿದ ಕುವೈತ್ ಸೂಪರ್ ಮಾರ್ಕೆಟ್! - Mahanayaka

ಪ್ರವಾದಿ ವಿರುದ್ಧ ಹೇಳಿಕೆ: ಭಾರತದ ಉತ್ಪನ್ನಗಳನ್ನು ತೆಗೆದು ಹಾಕಿದ ಕುವೈತ್ ಸೂಪರ್ ಮಾರ್ಕೆಟ್!

kuwait
07/06/2022

ಕುವೈತ್ ಸಿಟಿ: ಬಿಜೆಪಿ ನಾಯಕರ ಕೋಮು ಅಮಲಿನ ಹೇಳಿಕೆ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಸೃಷ್ಟಿಸಿದಂತಾಗಿದ್ದು,  ಪ್ರವಾದಿ ವಿರುದ್ಧ ಭಾರತೀಯ ಜನತಾ ಪಕ್ಷದ ವಕ್ತಾರೆ  ನೂಪುರ್ ಶರ್ಮಾ ನೀಡಿದ ಹೇಳಿಕೆಯನ್ನು ಇಸ್ಲಾಂ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಿವೆ. ಈ ನಡುವೆ ಇಸ್ಲಾಂ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಿರುವವರು, ಉದ್ಯಮಗಳನ್ನು ನಡೆಸುವವರು ಆತಂಕಕ್ಕೊಳಗಾಗಿದ್ದಾರೆ.

ಕುವೈತ್ ನ ಸೂಪರ್ ಮಾರ್ಕೆಟ್ ಗಳಲ್ಲಿ ಭಾರತೀಯ ಉತ್ಪನ್ನಗಳನ್ನು ತೆಗೆದು ಹಾಕಲಾಗಿದೆ. ಅಲ್-ಅರ್ದಿಯಾ ಕೋ-ಆಪರೇಟಿವ್ ಸೊಸೈಟಿ ಅಂಗಡಿಯ ಕಾರ್ಮಿಕರು ಭಾರತೀಯ ಚಹಾ ಮತ್ತು ಇತರ ಉತ್ಪನ್ನಗಳನ್ನು ಟ್ರಾಲಿಗಳಲ್ಲಿ ರಾಶಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ADS

ಸೌದಿ ಅರೇಬಿಯಾ, ಕತಾರ್ ಮತ್ತು ಈ ಪ್ರದೇಶದ ಇತರ ದೇಶಗಳು ಪ್ರವಾದಿ ನಿಂದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.   ಕೈರೋದ ಪ್ರಭಾವಿ ಅಲ್-ಅಜರ್ ವಿಶ್ವವಿದ್ಯಾಲಯವು ಬಿಜೆಪಿಯ ವಕ್ತಾರೆಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ.

ಕುವೈತ್ ಸಿಟಿಯ ಹೊರಗಿರುವ ಸೂಪರ್ ಮಾರ್ಕೆಟ್‌ನಲ್ಲಿ ಅಕ್ಕಿಯ ಚೀಲಗಳು ಮತ್ತು ಮಸಾಲೆಗಳು ಮತ್ತು ಮೆಣಸಿನಕಾಯಿಗಳ ಕಪಾಟುಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿತ್ತು. ಮತ್ತು ಅರೇಬಿಕ್ ಭಾಷೆಯಲ್ಲಿ “ನಾವು ಭಾರತೀಯ ಉತ್ಪನ್ನಗಳನ್ನು ತೆಗೆದುಹಾಕಿದ್ದೇವೆ” ಎಂದು ಬರೆದ ಸೂಚನ ಫಲಕ ಕಂಡು ಬಂದಿದೆ.

“ಕುವೈತ್ ಮುಸ್ಲಿಮರಾದ ನಾವು  ಪ್ರವಾದಿಯನ್ನು ಅವಮಾನಿಸುವುದನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಈ ಸೂಪರ್ ಮಾರ್ಕೆಟ್ ನ  ಸಿಇಒ ನಾಸರ್ ಅಲ್-ಮುತೈರಿ ಎಎಫ್‌ ಪಿಗೆ ತಿಳಿಸಿದ್ದಾರೆ..

ಬಿಜೆಪಿ ವಕ್ತಾರೆ  ನೂಪುರ್ ಶರ್ಮಾ ಅವರ ಹೇಳಿಕೆಗಳು ಮುಸ್ಲಿಮರಲ್ಲಿ ಆಕ್ರೋಶವನ್ನು ಹುಟ್ಟುಹಾಕಿವೆ.  ಇನ್ನೂ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಸೃಷ್ಟಿಸುವ ಹೇಳಿಕೆ ನೀಡಿದ ಬಳಿಕ ನೂಪುರ್ ಶರ್ಮಾ ಅವರನ್ನು  ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ನೂಪುರ್ ಶರ್ಮಾ ನನ್ನ ಮಾತುಗಳು ಯಾರಿಗಾದರೂ ನೋವುಂಟು ಮಾಡಿದ್ದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೆ, ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು  ಹೇಳಿಕೆ ನೀಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಯಾತ್ರಿಕರ ಕಾರು ಸೇತುವೆಗೆ ಡಿಕ್ಕಿ: ಇಬ್ಬರು ಸಾವು

ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು ಎಂದು ಅಂಬೇಡ್ಕರ್ ಹೇಳಿದ್ದರು: ರುಕ್ಮಯ ಎಂ. ಕಕ್ಕೆಪದವು

7,500 ಕೆ.ಜಿ. ಹಳೆಯ ಮೀನು ವಶಕ್ಕೆ ಪಡೆದುಕೊಂಡ ಆಹಾರ ಸುರಕ್ಷತಾ ಅಧಿಕಾರಿಗಳು: ಮೀನಿನಲ್ಲೂ ವಿಷ!

ಪ್ರವಾದಿ ವಿರುದ್ಧ ಹೇಳಿಕೆ: ಮುಸ್ಲಿಮ್ ರಾಷ್ಟ್ರಗಳ ಖಂಡನೆ ಬೆನ್ನಲ್ಲೇ ತನ್ನ ನಿಲುವು ಸ್ಪಷ್ಟಪಡಿಸಿದ ಭಾರತ

ಇತ್ತೀಚಿನ ಸುದ್ದಿ