ಪ್ರತಿಪಕ್ಷಗಳನ್ನು ಒಗ್ಗೂಡಿಸಿದ ನಿತೀಶ್ ಕುಮಾರ್ ಗೆ ಹೊಸ ಸವಾಲು: ಬಿಹಾರ ಸಿಎಂ ವಿರುದ್ಧ ಯುವ ಶಿಕ್ಷಕರ ಕೆಂಗಣ್ಣು..! - Mahanayaka
1:45 AM Thursday 12 - December 2024

ಪ್ರತಿಪಕ್ಷಗಳನ್ನು ಒಗ್ಗೂಡಿಸಿದ ನಿತೀಶ್ ಕುಮಾರ್ ಗೆ ಹೊಸ ಸವಾಲು: ಬಿಹಾರ ಸಿಎಂ ವಿರುದ್ಧ ಯುವ ಶಿಕ್ಷಕರ ಕೆಂಗಣ್ಣು..!

02/07/2023

ಪಾಟ್ನಾದಲ್ಲಿ ನಡೆದ 15 ಮಿತ್ರ ಪಕ್ಷಗಳ ಸಭೆಯ ಭರ್ಜರಿ ಯಶಸ್ಸಿನ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮಹಾಘಟಬಂಧನ್ (ಮಹಾ ಮೈತ್ರಿಕೂಟ) ನಾಯಕರ ನೈತಿಕ ಸ್ಥೈರ್ಯವು ತುಂಬಾ ಹೆಚ್ಚಾಗಿದೆ. ಆದರೆ ಇದೇ ಸಮಯದಲ್ಲಿ ನಿತೀಶ್ ಕುಮಾರ್ ಅವರು ತಾವು ತೆಗೆದುಕೊಂಡ ಕೆಲ ನಿರ್ಧಾರಗಳಿಂದ ಕೆಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಬಿಹಾರದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭಾಗವಹಿಸಲು ಇತರ ರಾಜ್ಯಗಳ ಟಿಇಟಿ ಉದ್ಯೋಗಾಕಾಂಕ್ಷಿಗಳಿಗೂ ಕೂಡಾ ನಿತೀಶ್ ಕುಮಾರ್ ಅವಕಾಶ ನೀಡಿದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಹಾರ ಶಿಕ್ಷಣ ಸಚಿವ ಪ್ರೊ.ಚಂದ್ರಶೇಖರ್, ಬಿಹಾರದ ಟಿಇಟಿ ಆಕಾಂಕ್ಷಿಗಳಿಗೆ ಇತರ ರಾಜ್ಯಗಳಿಗಿಂತ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಇಂಗ್ಲಿಷ್ನಲ್ಲಿ ಕಡಿಮೆ ಜ್ಞಾನವಿದೆ ಎಂದಿದ್ದಾರೆ.

ನಿತೀಶ್ ಕುಮಾರ್ ಸರ್ಕಾರದ ಈ ನಿರ್ಧಾರದ ನಂತರ, ಟಿಇಟಿ ಆಕಾಂಕ್ಷಿಗಳು ಪಾಟ್ನಾದಲ್ಲಿ ರಸ್ತೆಗಿಳಿಯುವುದರೊಂದಿಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಯಿತು. ಜುಲೈ 10 ರಿಂದ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನದಲ್ಲಿ ವಿಧಾನಸಭೆಗೆ ಘೇರಾವ್ ಮಾಡಲು ಬಿಹಾರ ಪ್ರಾಥಮಿಕ ಯುವ ಶಿಕ್ಷಕರ ಸಂಘ ನಿರ್ಧರಿಸಿದೆ. ರಾಜ್ಯದಲ್ಲಿ 1.70 ಲಕ್ಷ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ನಿವಾಸ ನೀತಿಯನ್ನು ಬದಲಾಯಿಸಿದ ನಿತೀಶ್ ಕುಮಾರ್ ಅವರ ನಿರ್ಧಾರದ ನಂತರ ಬಿಹಾರದಲ್ಲಿ ಮಹಾ ಆಂದೋಲನ್ (ಮಹಾ ಕ್ರಾಂತಿ) ಗೆ ಅವರು ಮನವಿ ಮಾಡಿದ್ದಾರೆ.

ಈ ಮೊದಲು 1.70 ಲಕ್ಷ ಹುದ್ದೆಗಳನ್ನು ಬಿಹಾರ ಮೂಲದ ಸಿಟಿಇಟಿ ಮತ್ತು ಬಿಟಿಇಟಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಮಾತ್ರ ಇಡಲಾಗಿತ್ತು. ಈಗ, ಸಿಟಿಇಟಿ ಅಥವಾ ಬಿಟಿಇಟಿ ಉತ್ತೀರ್ಣರಾದ ಇತರ ರಾಜ್ಯಗಳ ವಿದ್ಯಾರ್ಥಿಗಳು ಸಹ ಉದ್ಯೋಗಕ್ಕೆ ಅರ್ಹರಾಗಬಹುದು.

ಸಾವಿರಾರು ಉದ್ಯೋಗಾಕಾಂಕ್ಷಿಗಳು ಶನಿವಾರ ಪಾಟ್ನಾದ ಬೀದಿಗಳಲ್ಲಿ ಬಂದು ನಿತೀಶ್ ಕುಮಾರ್ ಅವರ ಪ್ರತಿಕೃತಿಯನ್ನು ದಹಿಸಿದ್ದರು. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. “ಬಿಹಾರದ ಯುವಕರು ಈಗಾಗಲೇ ಉದ್ಯೋಗದ ಕೊರತೆಯನ್ನು ಎದುರಿಸುತ್ತಿದ್ದಾರೆ. ನಿತೀಶ್ ಕುಮಾರ್ ಅವರ ಹೊಸ ಕ್ರಮವು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗವನ್ನು ನೀಡುತ್ತದೆ. ಇದು ಇತರ ರಾಜ್ಯಗಳಲ್ಲಿ ನಡೆಯುತ್ತಿಲ್ಲ. ಆದರೆ ಬಿಹಾರ ಸರ್ಕಾರ ಇದನ್ನು ಏಕೆ ಮಾಡುತ್ತಿದೆ..? ನಮ್ಮ ಭವಿಷ್ಯವನ್ನು ಪಣಕ್ಕಿಟ್ಟು ನಿತೀಶ್ ಕುಮಾರ್ ಅವರ ರಾಷ್ಟ್ರೀಯ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಅವಕಾಶ ನೀಡುವುದಿಲ್ಲ” ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿ ರಾಹುಲ್ ಕುಮಾರ್ ಕಿಡಿಕಾರಿದ್ದಾರೆ.

ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಗರದ ಕೆಲವು ಪ್ರದೇಶಗಳನ್ನು ನಿರ್ಬಂಧಿಸಿದ್ದರು. ಮಹಾಘಟಬಂಧನ್ ಸರ್ಕಾರದ ನಾಯಕರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ