ರಂಝಾನಿನ ಮೊದಲ 10 ದಿವಸಗಳಲ್ಲಿ ಮದೀನಾದ ಮಸ್ಜಿದುನ್ನಬವಿಗೆ ಒಟ್ಟು 97 ಲಕ್ಷ ಮಂದಿ ಭೇಟಿ

13/03/2025
ರಂಝಾನಿನ ಮೊದಲ 10 ದಿವಸಗಳಲ್ಲಿ ಮದೀನಾದ ಮಸ್ಜಿದುನ್ನಬವಿಗೆ ಒಟ್ಟು 97 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಮಕ್ಕಾದ ಮಸ್ಜಿದುಲ್ ಹರಾಮ್ ಗೆ ಪ್ರತಿದಿನ 10 ಲಕ್ಷಕ್ಕಿಂತಲೂ ಅಧಿಕ ಮಂದಿ ಭೇಟಿ ನೀಡುತ್ತಿದ್ದಾರೆ ಎಂದೂ ವರದಿಯಾಗಿದೆ.
ಜಿದ್ದ ಮದೀನಾ ತಾಯಿಫ್ ಜಿಸಾನ್ ಮುಂತಾದ ಕಡೆಗಳಿಂದ ಮಕ್ಕಾದ ಮಸ್ಜಿದುಲ್ ಹರಾಂಗೆ ಬರುವವರಿಗೆ ಗಡಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಇಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡಿ ಉಮ್ರ ಯಾತ್ರಿಕರೂ ಬರಬೇಕಾಗಿದೆ. ಯಾತ್ರಿಕರ ನೆರವಿಗಾಗಿ 11 ಸಾವಿರಕ್ಕಿಂತಲೂ ಅಧಿಕ ಸೇವಕರನ್ನು ನೇಮಿಸಲಾಗಿದೆ ಎಂದು ಮಕ್ಕಾದ ಹರಮ್ ನಿಂದ ಬಿಡುಗಡೆಗೊಳಿಸಲಾದ ವರದಿಯಲ್ಲಿ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj