ಮೂಡಿಗೆರೆ: ಹಸಿರು ಫೌಂಡೇಶನ್ (ರಿ) ಸಂಸ್ಥೆಯನ್ನು ಉದ್ಘಾಟನೆ

ಮೂಡಿಗೆರೆ: ಯುವಕರ ತಂಡ ಸಾಮಾಜಿಕ ಚಟುವಟಿಕೆ ಮಾಡುವ ನಿಟ್ಟಿನಲ್ಲಿ ಹಸಿರು ಫೌಂಡೇಶನ್ (ರಿ) ಸಂಸ್ಥೆಯನ್ನು ಕಟ್ಟಿಕೊಂಡು ಇಂದು ಜೂನಿಯರ್ ಪ್ರವಾಸಿ ಮಂದಿರದ ಆವರಣದಲ್ಲಿ ಉದ್ಘಾಟಿಸಲಾಯಿತು.
ನಂತರ ಪ್ರಾಯೋಗಿಕವಾಗಿ ಸರ್ಕಾರಿ ಪ್ರೌಢಶಾಲೆ ಜೂನಿಯರ್ ಕಾಲೇಜ್ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು, ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅನಂತ್ ಮಾತನಾಡಿ ಯುವಕರ ನಡೆಯನ್ನು ಶ್ಲಾಘಿಸಿದರು.
ಕಾಡು ಬೆಳೆಸಿ ನಾಡು ಉಳಿಸಿ ಅನ್ನೋ ಪದವನ್ನು ಪಠ್ಯದಲ್ಲಿ ಕೇಳಿದಿವಿ ಆದ್ರೆ ಅದನ್ನ ಕಾರ್ಯರೂಪಕ್ಕೆ ತರೊ ಯೋಚನೆ ಮಾಡೋದಿಲ್ಲ, ನಾವು ನಮ್ಮ ಮುಂದಿನ ಪೀಳಿಗೆಗೆ ಏನಾದ್ರು ಕೊಡುಗೆ ನೀಡಬೇಕು ಅಂದ್ರೆ ಅದು ಪರಿಸರ ಸಂರಕ್ಷಣೆ, ನಮಗೆ ಗಾಳಿ ನೀರು ಹೇರಳವಾಗಿ ಸಿಕ್ತಿದೇ ಅದಕ್ಕೆ ಕಾಡು ಉಳಿಸೋ ಯೋಚನೆ ಇಲ್ಲ, ನಾವು ಪರಿಸರ ನಾಶ ಮಾಡಿದ್ರೆ ಮುಂದಿನ ಪೀಳಿಗೆ ಮಳೆ ಗಾಳಿ ಇಲ್ಲ ಅಂದ್ರೆ ಜೀವಿಸಲು ಸಾದ್ಯವ ಅದಕ್ಕಾಗಿಯೇ ನಾವೆಲ್ಲ ಪಣ ತೊಡಬೇಕುಎಂದರು.
ಅರಣ್ಯ ಇಲಾಖೆ ಅಧಿಕಾರಿಗಳಾದ ಚೇತನ್ ಕುಮಾರ್ ಮಾತನಾಡಿ, ಹಸಿರು ಫೌಂಡೇಶನ್ (ರಿ) ಸಂಸ್ಥೆಗೆ ಶುಭಕೋರಿ ಅರಣ್ಯ ಇಲಾಖೆಯಿಂದ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು. ಪ್ರಾಂಶುಪಾಲ ಜಗದೀಶ್ ನಾಯ್ಕ್ ಮಾತನಾಡಿ, ದಿಟ್ಟ ಹೆಜ್ಜೆ ಇಟ್ಟಿರುವ ಯುವಕರ ತಂಡಕ್ಕೆ ಶ್ಲಾಘಿಸಿದರು.
ನಂತರ ಹಸಿರು ಫೌಂಡೇಶನ್ (ರಿ) ಟ್ರಸ್ಟ್ ನ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಗಿಡ–ಮರಗಳನ್ನು ಬೆಳೆಸುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಇದರಿಂದಲೇ ಸಕಲ ಸಂಪತ್ತು ದೊರಕುತ್ತದೆ ಮುಗ್ಧರು ಮತ್ತು ಅನಕ್ಷರಸ್ಥರಲ್ಲಿರುವ ಪರಿಸರ ಪ್ರಜ್ಞೆ ಸುಶಿಕ್ಷಿತರಲ್ಲಿ ಇಲ್ಲದಿರುವುದು ದುರದೃಷ್ಟಕರ. ಪರಿಸರ ಸಂರಕ್ಷಣೆ ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ. ಇಡಿ ಸಮುದಾಯದ ಸಹಭಾಗಿತ್ವ, ಇಚ್ಛಾಶಕ್ತಿ ಇದ್ದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ .ಸರ್ಕಾರಿ ಕಾರ್ಯಕ್ರಮಗಳಲ್ಲಿ ಅತಿಥಿಗಳ ಸತ್ಕಾರಕ್ಕೆ ಹಾರದ ಬದಲು ಸಸಿಗಳನ್ನು ಕೊಟ್ಟು ನೆಟ್ಟು ಬೆಳೆಸಲು ಪ್ರೇರೇಪಿಸಬೇಕು. ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲೂ ಪರಿಸರ ಸಂರಕ್ಷಣೆ ವಿಷಯ ಆದ್ಯತೆ ಪಡೆಯಬೇಕು. ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕು ಹೀಗಾಗಿ ನಾವು ಸ್ನೇಹಿತರೆ ಸೇರಿಕೊಂಡು ಸಂಸ್ಥೆ ಕಟ್ಟಿಕೊಂದಿದ್ದೇವೆ ಎಲ್ಲರೂ ಕೈಜೋಡಿಸಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಅಶ್ವಥ್ ಹೊಸಕೆರೆ, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಖಜಾಂಚಿ ಜಯಂತ್ ಹೊಸಕೆರೆ ಟ್ರಸ್ಟ್ ನ ನಿರ್ದೇಶಕರುಗಳಾದ ಶೋಧನ್ ಹೊಸಕೆರೆ, ಸಚಿನ್ ಮಾಲಿಗನಾಡು, ಅಖಿಲೇಶ್ ಕೇಸವಳಲು, ಶರತ್ ಹೆಬ್ರಿಗೆ, ರತನ್ ದೇವರುಂದ ,ಪೂರ್ಣೆಶ್ ಹೆಬ್ರಿಗೆ ಶರತ್ ಬಿನ್ನಡಿ, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಹಾಜರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7