ಇಂಧನ ದರ ಏರಿಕೆ ಮೂಲಕ ನರೇಂದ್ರ ಮೋದಿ ಸರ್ಕಾರ ಪ್ರತಿ ದಿನ ಸುಲಿಗೆ ಮಾಡುತ್ತಿದೆ: ಕಾಂಗ್ರೆಸ್‌ ಆಕ್ರೋಶ - Mahanayaka

ಇಂಧನ ದರ ಏರಿಕೆ ಮೂಲಕ ನರೇಂದ್ರ ಮೋದಿ ಸರ್ಕಾರ ಪ್ರತಿ ದಿನ ಸುಲಿಗೆ ಮಾಡುತ್ತಿದೆ: ಕಾಂಗ್ರೆಸ್‌ ಆಕ್ರೋಶ

surjewala
30/03/2022

ನವದೆಹಲಿ: ಇಂಧನ ದರ ನಿರಂತರವಾಗಿ ಏರಿಕೆ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರನ್ನು ಪ್ರತಿ ದಿನ ಸುಲಿಗೆ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೆವಾಲ, ಜನಸಾಮಾನ್ಯ ಬಜೆಟ್‌ ಮೇಲೆ ಮೋದಿ ಸರ್ಕಾರ ದಿನನಿತ್ಯದ ದಾಳಿ… ಸುಲಿಗೆ.. ಶೋಷಣೆ ಮುಂದುವರಿದಿದೆ ಎಂದು ಉಲ್ಲೇಖಿಸಿದ್ದಾರೆ.

ಎಂಟು ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಾಡಲಾಗಿದ್ದು, ಒಟ್ಟುಪ್ರತಿ ಲೀಟರ್‌ಗೆ 5.60ರಷ್ಟು ಹೆಚ್ಚಿಸಿದಂತಾಗಿದೆ. ಈ ಲೂಟಿಗೆ ಕೊನೆಯೆಂದು? ಇದಕ್ಕೆ ಪ್ರಧಾನಿ ಹೊಣೆಗಾರರಲ್ಲವೇ? ಉತ್ತರ ಎಲ್ಲಿದೆ ಎಂದು ರಣದೀಪ್‌ ಸುರ್ಜೆವಾಲ ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರವು ಪೆಟ್ರೋಲ್‌ ದರದ ಶತಕ ಬಾರಿಸಿದೆ ಎಂದು ಮತ್ತೊಂದು ಟ್ವೀಟ್‌ ಮಾಡಿರುವ ಅವರು, ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್‌ ದರವನ್ನು ಉಲ್ಲೇಖಿಸಿದ್ದಾರೆ.

ಸರ್ಕಾರ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಬುಧವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ 80 ಪೈಸೆಯಷ್ಟು ಹೆಚ್ಚಿಸಿವೆ. ಇದರೊಂದಿಗೆ ಕಳೆದ ಒಂಬತ್ತು ದಿನಗಳಲ್ಲಿ ಎಂಟು ಬಾರಿ ತೈಲ ದರ ಏರಿಕೆ ಮಾಡಿದಂತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶ್ರೀನಗರದಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರು ಹತ್ಯೆ

ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ: ರಾತ್ರಿಯಿಡೀ ಬ್ಯಾಂಕ್ ಲಾಕರ್‌ ನಲ್ಲೇ ಸಿಲುಕಿದ್ದ ವೃದ್ಧ

ಉಕ್ರೇನ್‌ ನ ಮೈಕೊಲೈವ್‌ ಮೇಲೆ ರಷ್ಯಾ ದಾಳಿ: 12ಕ್ಕೆ ಏರಿಕೆಯಾದ ಮೃತರ ಸಂಖ್ಯೆ

SSLC  ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ನೀಡಿದ್ದಕ್ಕೆ 7 ಸಿಬ್ಬಂದಿ ಅಮಾನತು

 

ಇತ್ತೀಚಿನ ಸುದ್ದಿ