ಗ್ಯಾಸ್ ಬುಕ್ ಮಾಡಲು ಈಗ ಸುಲಭ | ಮಿಸ್ ಕಾಲ್ ನೀಡಿ ಹೇಗೆ ಗ್ಯಾಸ್ ಬುಕ್ ಮಾಡುವುದು? | ಇಲ್ಲಿದೆ ಮಾಹಿತಿ - Mahanayaka

ಗ್ಯಾಸ್ ಬುಕ್ ಮಾಡಲು ಈಗ ಸುಲಭ | ಮಿಸ್ ಕಾಲ್ ನೀಡಿ ಹೇಗೆ ಗ್ಯಾಸ್ ಬುಕ್ ಮಾಡುವುದು? | ಇಲ್ಲಿದೆ ಮಾಹಿತಿ

03/01/2021

ನವದೆಹಲಿ: ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ಮಾಡಲು ಆನ್ ಲೈನ್ ನಲ್ಲಿ ಪರದಾಡುತ್ತಿರುವ ಜನರಿಗೆ ಇದೀಗ ಸಿಹಿ ಸುದ್ದಿ ದೊರಕಿದ್ದು, ಇನ್ನು ಕೇವಲ ಒಂದು ಮಿಸ್ ಕಾಲ್ ನೀಡಿದರೆ ಸಾಕು.  ನಿಮ್ಮ ಮನೆಯಂಗಳಕ್ಕೆ ಅಡುಗೆ ಅನಿಲ ತಲುಪುತ್ತದೆ.

ಹೌದು…! ಇಂತಹದ್ದೊಂದು ಯೋಜನೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದ್ದಾರೆ.  ಇಂಡಿಯನ್ ಆಯಿಲ್ ಎಲ್ ಪಿಜಿ ಗ್ರಾಹಕರು ರೀಫಿಲ್ ಬುಕ್ಕಿಂಗ್ ಗಾಗಿ 8454955555 ನಂಬರ್ ಗೆ ನಿಮ್ಮ ನೋಂದಾಯಿತ ನಂಬರ್ ನಿಂದ ಮಿಸ್ಡ್ ಕಾಲ್ ನೀಡಿದರೆ, ಎಲ್ ಪಿಜಿ ರೀಫಿಲ್ ಕನೆಕ್ಷನ್ ಬುಕ್ಕಿಂಗ್ ಯಶಸ್ವಿ ಎಂದು ಗ್ರಾಹಕರಿಗೆ ಮೆಸೇಜ್ ಬರುತ್ತದೆ.


ADS

ಮಿಸ್ಡ್ ಕಾಲ್ ಮೂಲಕ ಗ್ಯಾಸ್ ಬುಕ್ಕಿಂಗ್  ಐವಿಆರ್ ಎಸ್ ವ್ಯವಸ್ಥೆಗಿಂತ ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಿದೆ.  ಇನ್ನೂ ವಿಶೇಷವೇನೆಂದರೆ,  ಮಿಸ್ಡ್ ಕಾಲ್ ವ್ಯವಸ್ಥೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.  ಗೂಗಲ್ ಪೇ, ಪೇಟಿಎಂ ಮೂಲಕ ಗ್ಯಾಸ್ ಬುಕ್ ಮಾಡಲು ಇಂಟರ್ ನೆಟ್ ಸಮಸ್ಯೆಗಳು ಇರುವ ಪ್ರದೇಶದ ಜನರಿಗೆ ಈ ಯೋಜನೆ ಅನುಕೂಲಕರವಾಗಿದೆ.

ಇತ್ತೀಚಿನ ಸುದ್ದಿ