ಇಂಧನ ಬೆಲೆ ಏರಿಕೆ ಬಗ್ಗೆ ಪರಿಹಾರೋಪಾಯ ಹುಡುಕಿ | ಕೇಂದ್ರ ಸರ್ಕಾರಕ್ಕೆ ಮಾಯಾವತಿ ಸಲಹೆ - Mahanayaka

ಇಂಧನ ಬೆಲೆ ಏರಿಕೆ ಬಗ್ಗೆ ಪರಿಹಾರೋಪಾಯ ಹುಡುಕಿ | ಕೇಂದ್ರ ಸರ್ಕಾರಕ್ಕೆ ಮಾಯಾವತಿ ಸಲಹೆ

21/02/2021

ನವದೆಹಲಿ: ಇಂಧನ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರ ಯಾವುದಾದರೂ ಪರಿಹಾರೋಪಾಯ ಕಂಡುಕೊಳ್ಳಬೇಕು ಎಂದು  ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಬೃಹತ್ ಮಟ್ಟದ ಬೆಲೆ ಏರಿಕೆ ಜನ ಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ  ಇಂಧನ ದರದ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿದ ಮೇಲೆ ಈ ಸಮಸ್ಯೆ ಉದ್ಬವವಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇಂಧನ ಬೆಲೆ ಏರಿಕೆ ಸಮಸ್ಯೆಗೆ ಸದ್ಯ ಪರಿಹಾರ ಎನ್ನುವುದಕ್ಕಿಂತಲೂ ವಿರೋಧ ಮತ್ತು ಪ್ರತಿ ವಿರೋಧಗಳು ಮಾತ್ರವೇ ವ್ಯಕ್ತವಾಗುತ್ತಿದೆ. ಆದರೆ ಅಗತ್ಯ ಕ್ರಮ ಏನು ಎಂಬ ಬಗ್ಗೆಯೂ ಚರ್ಚೆಯಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮಾಯಾವತಿ ಅವರು ಈ ಸಂಬಂಧ ಪರಿಹಾರವನ್ನು ಹುಡುಕುವಂತೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ