ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಭಾರತಕ್ಕೆ ಬೇಕಿದೆ: ರಾಜ್ಯಸಭಾ ಸಂಸದ ಕಪಿಲ್ ಸಿಬಲ್ - Mahanayaka
6:28 AM Thursday 6 - February 2025

ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಭಾರತಕ್ಕೆ ಬೇಕಿದೆ: ರಾಜ್ಯಸಭಾ ಸಂಸದ ಕಪಿಲ್ ಸಿಬಲ್

kapil seball
30/05/2023

ಹೊಸ ಅಥವಾ ಹಳೆಯ ಭಾರತವಲ್ಲ, ತಮಗೆ ಬೇಕಿರುವುದು ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಹೊಂದಿರುವ ಭಾರತ ಎಂದು ನೂತನ ಸಂಸತ್ ಭವನ ಉದ್ಘಾಟನೆ ಕುರಿತು ಬಿಜೆಪಿ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.

ಕಾನೂನು ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ನಾಗರಿಕರನ್ನು ಕೊಲ್ಲುವುದಿಲ್ಲ ಎಂದು ಸಿಬಲ್ ಹೇಳಿದ್ದಾರೆ.

ಹೊಸ ಸಂಸತ್ ಭವನದ ಉದ್ಘಾಟನೆ ದೇಶದ ಅಭಿವೃದ್ಧಿ ಪಯಣದಲ್ಲಿ ‘ಅಮರ’ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಕಾರ್ಯಕ್ರಮವನ್ನು ಬಣ್ಣಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್, 5.-6 ಅಂಶಗಳನ್ನು ಪ್ರಸ್ತಾಪಿಸಿದ್ದು, ತಮಗೆ ಬೇಕಿರುವ ಭಾರತವನ್ನು ಪಟ್ಟಿ ಮಾಡಿದ್ದಾರೆ.

1. “ತಮಗೆ ಬೇಕಿರುವುದು ಹೊಸ ಅಥವಾ ಹಳೆಯ ಭಾರತವಲ್ಲ, 2. ಧಾರ್ಮಿಕ ಪ್ರಕ್ರಿಯೆಗಳ ಹೊರತಾದ ಸಂಸತ್ ಇರುವ ಭಾರತ ಬೇಕು 3. ಎಲ್ಲರನ್ನೂ ಸಮಾನವಾಗಿ ನೋಡುವ ಕಾನೂನು ಇರಬೇಕು, 4. ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಹತ್ಯೆ ನಡೆಯದಂತಹ ಭಾರತ ಬೇಕು, 5. ಯಾವುದೇ ಯುವತಿ/ಯುವಕ ಪ್ರೀತಿಸಿ ವಿವಾಹವಾದರೆ ಬಜರಂಗದಳದ ಭಯ ರಹಿತವಾಗಿರುವ ಭಾರತ ಬೇಕು. 6. ಮಾಧ್ಯಮಗಳು ತಟಸ್ಥವಾಗಿರಬೇಕು. ಎಂದು ಸಿಬಲ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ