ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್‌ಗೆ ಪೂರ್ಣ ಸದಸ್ಯತ್ವ ನೀಡಬೇಕು: ನಿರ್ಣಯದ ಪರವಾಗಿ ಮತ ಚಲಾಯಿಸಿದ ಭಾರತ

ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್‌ಗೆ ಪೂರ್ಣ ಸದಸ್ಯತ್ವ ನೀಡಬೇಕೆಂಬ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. ಭದ್ರತಾ ಮಂಡಳಿಯು ಈ ವಿಷಯವನ್ನು ಅನುಕೂಲಕರವಾಗಿ ಮರುಪರಿಶೀಲಿಸುವಂತೆ ನಿರ್ಣಯವು ಶಿಫಾರಸು ಮಾಡಿದೆ. ನಿರ್ಣಯದ ವಿರುದ್ಧ ಅಮೆರಿಕ ಮತ ಚಲಾಯಿಸಿದೆ.
ಈ ನಿರ್ಣಯದ ಪರವಾಗಿ ಭಾರತ ಸೇರಿದಂತೆ ಒಟ್ಟು 143 ರಾಷ್ಟ್ರಗಳು ಮತ ಚಲಾಯಿಸಿದ್ದರೆ, 25 ರಾಷ್ಟ್ರಗಳು ಗೈರಾಗಿದ್ದವು. ನಿರ್ಣಯದ ವಿರುದ್ಧ ಅಮೆರಿಕ, ಇಸ್ರೇಲ್, ಪಪುವಾ ನ್ಯೂ ಗಿನಿ, ಪಲೌ, ನೌರು, ಮೈಕ್ರೋನೇಷ್ಯಾ, ಆರ್ಜೆಂಟಿನ, ಹಂಗೆರಿ, ಝೆಕಿಯಾ ಮತ ಚಲಾಯಿಸಿವೆ.
ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆಯಲು ಫೆಲೆಸ್ತೀನ್ ಅರ್ಹವಾಗಿದೆ ಎಂದು ಸಂಯುಕ್ತ ಅರಬ್ ಸಂಸ್ಥಾನ ನಿರ್ಣಯ ಮಂಡಿಸಿದೆ.
ಕಳೆದ ತಿಂಗಳು, ಸಾಮಾನ್ಯ ಸಭೆಯಲ್ಲಿ ವ್ಯಾಪಕ ಬೆಂಬಲದ ಹೊರತಾಗಿಯೂ ಭದ್ರತಾ ಮಂಡಳಿಗೆ ಸಲ್ಲಿಸಿದ ಇದೇ ರೀತಿಯ ನಿರ್ಣಯವನ್ನು ಯುನೈಟೆಡ್ ಸ್ಟೇಟ್ಸ್ ವೀಟೋ ಅಧಿಕಾರ ಚಲಾವಣೆ ಮಾಡಿ ರದ್ದುಗೊಳಿಸಿತ್ತು. ಇದೀಗ ಯುಎಸ್ ಮತ್ತೊಮ್ಮೆ ವೀಟೋ ಅಧಿಕಾರ ಚಲಾವಣೆ ಮಾಡುವ ನಿರೀಕ್ಷೆಯಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth