3 ವಿಕೆಟ್ ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ: ಜಿದ್ದಾಜಿದ್ದಿನ ಹೋರಾಟ ಆರಂಭ
19/11/2023
ಆಸ್ಟ್ರೇಲಿಯಾ ತಂಡಕ್ಕೆ 240ರನ್ ಗಳ ಸವಾಲು ನೀಡಿರುವ ಟೀಮ್ ಇಂಡಿಯಾ ಇದೀಗ 2 ವಿಕೆಟ್ ಗಳನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾ 3 ವಿಕೆಟ್ ಗಳ ನಷ್ಟಕ್ಕೆ 47 ರನ್ ಗಳನ್ನು ಗಳಿಸಿದೆ.
ಮೊಹಮ್ಮದ್ ಶಮಿ ಎಸೆದ 2ನೇ ಓವರ್ ನ 2ನೇ ಎಸೆತದಲ್ಲಿ ಸ್ಲಿಪ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಡೇವಿಡ್ ವಾರ್ನರ್ ಕ್ಯಾಚ್ ನೀಡಿದರು. 3 ಎಸೆತಗಳಲ್ಲಿ 7 ರನ್ ಪಡೆದುಕೊಂಡ ವಾರ್ನರ್ ಆಟ ಮುಗಿಸಿದರು.
ಜಸ್ ಪ್ರೀಸ್ ಬುರ್ಮಾ ಎಸೆದ 5ನೇ ಓವರ್ ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಗೆ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್ ಮೈದಾನದಿಂದ ಹೊರ ನಡೆದರು. ಮಿಚೆಲ್ ಮಾರ್ಷ್ 15 ಎಸೆತಗಳಲ್ಲಿ 15 ರನ್ ಪಡೆದುಕೊಂಡು ಆಟ ಮುಗಿಸಿದರು.
ಜಸ್ ಪ್ರೀಸ್ ಬುರ್ಮಾ ಎಸೆದ 7ನೇ ಓವರ್ ನ ಕೊನೆಯ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಸ್ಮಿತ್ ಮೈದಾನದಿಂದ ನಿರ್ಗಮಿಸಿದರು. ಸ್ಮಿತ್ ಕೇವಲ 4 ರನ್ ಗಳೊಂದಿಗೆ ಮೈದಾನದಿಂದ ತೆರಳಿದರು.