India vs New Zealand Final Live: ಭಾರತಕ್ಕೆ 252 ರನ್ ಗಳ ಗುರಿ ನೀಡಿದ ನ್ಯೂಝಿಲೆಂಡ್

ದುಬೈ: ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಂಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದ್ದು, ಈ ಮೂಲಕ 252 ರನ್ ಗಳ ಗುರಿಯನ್ನು ನೀಡಿದೆ.
ಮೈಕೆಲ್ ಬ್ರೆಸ್ ವೆಲ್ ಮತ್ತು ಡೇರಿಲ್ ಮಿಚೆಲ್ ಅವರ ಅರ್ಧ ಶತಕವು 250 ರನ್ ಗಳ ಗಡಿದಾಟಲು ನ್ಯೂಝಿಲೆಂಡ್ ತಂಡಕ್ಕೆ ನೆರವಾಯಿತು.
ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಫೀಲ್ಟಿಂಗ್ ಮಾಡುವ ಅವಕಾಶ ಭಾರತಕ್ಕೆ ಬಿಟ್ಟುಕೊಟ್ಟಿತು. ಸದ್ಯ ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿದ್ದು, ಭಾರತ 59 ರನ್ ಗಳನ್ನು ಗಳಿಸಿದೆ. 7 ಓವರ್ ಗಳು ಪೂರ್ಣಗೊಂಡಿದೆ. ಯಾವುದೇ ವಿಕೆಟ್ ಗಳ ನಷ್ಟವಾಗಿಲ್ಲ. ರೋಹಿತ್ ಶರ್ಮಾ ಹಾಗೂ ಗಿಲ್ ಭರ್ಜರಿ ಆಟ ಆರಂಭಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: