ಭಾರತೀಯ ವಾಯುಪಡೆಯಲ್ಲಿ ಅಗ್ನಿ ವೀರ ಹುದ್ದೆಗಳ ನೇಮಕಾತಿ: ಮಹಿಳೆಯರಿಗೂ ಅವಕಾಶ! - Mahanayaka

ಭಾರತೀಯ ವಾಯುಪಡೆಯಲ್ಲಿ ಅಗ್ನಿ ವೀರ ಹುದ್ದೆಗಳ ನೇಮಕಾತಿ: ಮಹಿಳೆಯರಿಗೂ ಅವಕಾಶ!

agni veer
09/01/2025

Indian Air force AgniVeer Vayu Recruitment 2025 : ಭಾರತೀಯ ವಾಯುಪಡೆಯಲ್ಲಿ 2025ನೇ ಸಾಲಿಗೆ ವಾಯುಪಡೆಯಲ್ಲಿ ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಖಾಲಿ ಇರುವಂತಹ ಅಗ್ನಿವೀರ ವಾಯು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇಂದು ಅಂದರೆ 07 ಜನವರಿ 2025ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಯಾವೆಲ್ಲಾ ಅಭ್ಯರ್ಥಿಗಳು ಅರ್ಹತೆ ಇರಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ…

ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳು :

ಅಗ್ನಿವೀರ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅಥವಾ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮಾ ಮುಗಿಸಿರಬೇಕು.

ವಯೋಮಿತಿ ಅರ್ಹತೆ ನೋಡುವುದಾದರೆ 01 ಜನವರಿ 2005 ರಿಂದ 01 ಜುಲೈ 2008ರ ಅವಧಿಯಲ್ಲಿ ಜನಿಸಿರಬೇಕು.

ಮಾಸಿಕ ವೇತನ :

* ಮೊದಲನೆಯ ವರ್ಷ – 30,000ರೂ.

* ಎರಡನೇ ವರ್ಷ – 33,000ರೂ.

* ಮೂರನೇ ವರ್ಷ – 36,500ರೂ.

* ನಾಲ್ಕನೇ ವರ್ಷ – 40,000ರೂ.

ಅರ್ಜಿ ಶುಲ್ಕ : ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆಗೆ ಅರ್ಜಿ ಶುಲ್ಕ 550ರೂ. ನಿಗದಿಪಡಿಸಿದ್ದಾರೆ.

ಅರ್ಜಿ ಸಲ್ಲಿಸಲಿಕ್ಕೆ ಕೊನೆಯ ದಿನಾಂಕ — 27 ಜನವರಿ 2025

ಅರ್ಜಿ ಸಲ್ಲಿಕೆ ಲಿಂಕ್:  https://agnipathvayu.cdac.in/

ಅಧಿಸೂಚನೆ ಡೌನ್ಲೋಡ್ ಲಿಂಕ್:  https://agnipathvayu.cdac.in/AV/img/upcoming/AGNIVEER_VAYU_01-2026.pdf


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ