ಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವಕನ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಭಾರತೀಯ ಸೇನೆ - Mahanayaka
12:24 PM Wednesday 5 - February 2025

ಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವಕನ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಭಾರತೀಯ ಸೇನೆ

miram taron
21/01/2022

ನವದೆಹಲಿ: ದಾರಿ ತಪ್ಪಿ ಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಯುವಕನನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಸೇನೆ ಪಿಎಲ್‌ಎ ನೆರವನ್ನು ಕೋರಿದೆ.

ಮಿರಾಮ್ ತರೋನ್ ಎಂಬಾತ ನಾಪತ್ತೆಯಾಗಿರುವ ಯುವಕ. ಚೀನಾದ ಪ್ರದೇಶಕ್ಕೆ ತೆರಳಿ ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆ ಮಾಡಿ ಶಿಷ್ಟಾಚಾರದ ಪ್ರಕಾರ ವಾಪಸ್ ಭಾರತದ ವಶಕ್ಕೆ ಒಪ್ಪಿಸಬೇಕಿದೆ.

ಅರುಣಾಚಲ ಪ್ರದೇಶ ಸಂಸದ ತಪಿರ್ ಗೌ ಈ ಬಗ್ಗೆ ಮಾತನಾಡಿದ್ದು, ಪಿಎಲ್‌ಎ ಮಂಗಳವಾರ 17 ವರ್ಷದ ಬಾಲಕನನ್ನು ಭಾರತೀಯ ಪ್ರದೇಶದಿಂದ ಅಪಹರಿಸಿದೆ ಎಂದು ಆರೋಪ ಮಾಡಿದ್ದಾರೆ.

ರಕ್ಷಣಾ ಇಲಾಖೆಯಲ್ಲಿನ ಮೂಲಗಳು ಈ ಬಗ್ಗೆ ಮಾಹಿತಿ ಪಡೆದಿದೆ. ತಕ್ಷಣವೇ ಪಿಎಲ್‌ಎಯನ್ನು ಸಂಪರ್ಕಿಸಿ, ಗಿಡಮೂಲಿಕೆಗಳು ಹಾಗೂ ಇನ್ನಿತರ ವಸ್ತುಗಳನ್ನು ಪತ್ತೆ ಮಾಡುತ್ತಾ ಯುವಕನೋರ್ವ ದಾರಿ ತಪ್ಪಿ ಚೀನಾಪ್ರದೇಶದಿಂದ ಕಣ್ಮರೆಯಾಗಿರುವ ಬಗ್ಗೆ ತಿಳಿಸಿದೆ.

ಸ್ಯಾಂಗ್ಪೋ ನದಿ (ಬ್ರಹ್ಮಪುತ್ರ) ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಸೇರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಸಂಸದರು ಹೇಳಿದ್ದಾರೆ.

ಈ ಘಟನೆ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತೀಶ್ ಪರಮ್ನಾಯ್ಕ್ ಅವರಿಗೂ ಸಂಸದರು ಮಾಹಿತಿ ನೀಡಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜ್ ಮತ್ತೊಮ್ಮೆ ಅರೆಸ್ಟ್!

ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥ

ವೈದ್ಯಕೀಯ ಕೋರ್ಸ್‌: ಒಬಿಸಿಗಳಿಗೆ ಶೇ. 27, ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಗೆ ಸುಪ್ರೀಂಕೋರ್ಟ್‌ ಅನುಮತಿ

ಬ್ರಹ್ಮೋಸ್ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯ ಯಶಸ್ವಿ ಪರೀಕ್ಷೆ

ಬಂಟ್ವಾಳ: ಡೆತ್ ನೋಟು ಬರೆದಿಟ್ಟು ಪಟ್ಟಣ ಪಂಚಾಯತ್‌ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಇತ್ತೀಚಿನ ಸುದ್ದಿ