ಭಾರತೀಯ ಕೋಸ್ಟ್‌ ಗಾರ್ಡ್‌ ನಲ್ಲಿದೆ ಉದ್ಯೋಗಾವಕಾಶ: 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ

indian coast guard recruitment
25/06/2024

ಬೆಂಗಳೂರು:  ಭಾರತೀಯ ಕೋಸ್ಟ್‌ ಗಾರ್ಡ್‌ (Indian Coast Guard) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸುಮಾರು 320 ಹುದ್ದೆಗಳು ಖಾಲಿ ಇದ್ದು, 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದಾಗಿದೆ.  ಜುಲೈ 3  ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ನಾವಿಕ್‌ (ಜನರಲ್‌ ಡ್ಯೂಟಿ) – 260 ಮತ್ತು ಯಾಂತ್ರಿಕ್‌ – 60 ಹುದ್ದೆಗಳಿವೆ. ನಾವಿಕ್‌ (ಜನರಲ್‌ ಡ್ಯೂಟಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ತೇರ್ಗಡೆಯಾಗಿರಬೇಕು. 10, 12ನೇ ತರಗತಿ, ಡಿಪ್ಲೋಮಾ ಪಾಸಾದವರು ಯಾಂತ್ರಿಕ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಗಮನಿಸಿ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಅಸ್ಸೆಸ್‌ ಮೆಂಟ್‌ ಮತ್ತು ಅಡಾಟ್ಬೆಲಿಟಿ ಟೆಸ್ಟ್‌ (Assessment and Adaptability Test), ದೈಹಿಕ ಸಾಮರ್ಥ್ಯ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ನೇಮಕ ನಡೆಯಲಿದೆ. ಆಯ್ಕೆಯಾದವರಿಗೆ 21,700 ರೂ. – 29,200 ರೂ. ಮಾಸಿಕ ವೇತನ ದೊರೆಯಲಿದೆ. ಎಸ್‌ ಸಿ / ಎಸ್‌ ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಆನ್‌ ಲೈನ್‌ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು  https://cgept.cdac.in/icgreg/candidate/login  ವೆಬ್ ಸೈಟ್ ವಿಳಾಸಕ್ಕೆ ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ಭರ್ತಿಗೊಳಿಸಿ ಅರ್ಜಿ ಸಲ್ಲಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version