ಭಾರತ ಕ್ರಿಕೆಟ್ ತಂಡದ ವೇಗಿ ಸಿರಾಜ್ ಗೆ ತೆಲಂಗಾಣ ಸರ್ಕಾರದಿಂದ ವಿಶೇಷ ಗೌರವ: ಜಾಗದ ಜೊತೆಗೆ ಉದ್ಯೋಗ
ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣ ಸರ್ಕಾರ ವಿಶೇಷವಾಗಿ ಗೌರವಿಸಿದೆ. ಮನೆ ನಿರ್ಮಾಣಕ್ಕಾಗಿ ಹೈದರಾಬಾದ್ ನ ಅತಿ ದುಬಾರಿ ಏರಿಯಾವಾಗಿರುವ ಜುಬಿಲಿ ಹಿಲ್ಸ್ ನಲ್ಲಿ 600 ಸ್ಕ್ವೇರ್ ಯಾರ್ಡ್ ಭೂಮಿಯನ್ನು ಉಚಿತವಾಗಿ ನೀಡಿರುವುದಲ್ಲದೆ ಗ್ರೂಪ್ ಒನ್ ಉದ್ಯೋಗವನ್ನು ಪ್ರಕಟಿಸಿದೆ.
ಗ್ರೂಪ್ ವನ್ ಉದ್ಯೋಗವೆಂಬುದು ನೇರವಾಗಿ ಡೆಪ್ಯುಟಿ ಸೂಪರ್ ಡೆಂಟ್ ಆಫ್ ಪೊಲೀಸ್ ಹುದ್ದೆಗೆ ನೇರ ಪ್ರವೇಶವನ್ನು ನೀಡುತ್ತದೆ. ಸಿರಾಜ್ ಅವರು ಶೈಕ್ಷಣಿಕವಾಗಿ ಗ್ರೂಪ್ ಒನ್ ಹುದ್ದೆಗೆ ಅರ್ಹರಲ್ಲ. ಆದರೆ ರಾಜ್ಯ ಸರಕಾರವು ಅವರ ಸಾಧನೆಯನ್ನು ಪರಿಗಣಿಸಿ ಈ ಹುದ್ದೆಯನ್ನು ಅವರಿಗೆ ನೀಡುತ್ತದೆ. ಗ್ರೂಪ್ ವನ್ ಹುದ್ದೆಗೆ ಪದವಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಸಿರಾಜ್ ಅವರು 12ನೇ ತರಗತಿಯವರೆಗೆ ಕಲಿತಿದ್ದಾರೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಸೆಂಬ್ಲಿ ಗೆ ತಿಳಿಸಿದ್ದಾರೆ.
ರಿಕ್ಷಾ ಚಾಲಕನ ಮಗನಾಗಿರುವ ಸಿರಾಜ್ 2017ರಲ್ಲಿ ದೇಶದ ಗಮನಸೆಳೆದರು. ಎರಡು ಕೋಟಿ ಅರವತ್ತು ಲಕ್ಷ ರೂಪಾಯಿಗೆ ಅವರನ್ನು ಐಪಿಎಲ್ ಫ್ರಾಂಚೈಸಿ ಖರೀದಿಸಿತು. ಇದಾಗಿ ಕೆಲವೇ ತಿಂಗಳಲ್ಲಿ ಅವರು ಭಾರತೀಯ ತಂಡಕ್ಕೆ ಆಯ್ಕೆಯಾದರು.
ಈವರೆಗೆ 27 ಟೆಸ್ಟ್ ಪಂದ್ಯವನ್ನು ಆಡಿರುವ ಅವರು 74 ವಿಕೆಟ್ ಗಳನ್ನು ಪಡೆದಿದ್ದಾರೆ. ಹಾಗೆಯೇ 44 ಒಂಡೇ ಪಂದ್ಯದಿಂದ 71 ವಿಕೆಟ್ಗಳನ್ನು ಪಡೆದಿದ್ದಾರೆ ಅದೇ ವೇಳೆ 16 t20 ಪಂದ್ಯಗಳನ್ನು ಆಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth