ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿದೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸೋದು ಹೇಗೆ?
Indian Oil Corporation Limited Jobs — ಭಾರತೀಯ ತೈಲ ನಿಗಮ ಸಂಸ್ಥೆಯಿಂದ ಖಾಲಿ ಇರುವಂತಹ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಒಟ್ಟು 400 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಒಂದು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಯಾವ ಅಭ್ಯರ್ಥಿಗಳು ಅರ್ಹರು ಇದ್ದಾರೆ? ಅರ್ಜಿ ಸಲ್ಲಿಕೆ ಹೇಗೆ ಎಂಬ ಮಾಹಿತಿ ಕೆಳಗಿನ ಭಾಗದಿಂದ ತಿಳಿದುಕೊಳ್ಳಿ.
IOCL Jobs Details — ಭಾರತೀಯ ತೈಲ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ವಿವರ :
ಈ ಒಂದು ನೇಮಕಾತಿಯಲ್ಲಿ ಒಟ್ಟು 400 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.
* ಟ್ರೇಡ್ ಅಪ್ರೆಂಟಿಸ್ — 95 ಹುದ್ದೆಗಳು
* ತಂತ್ರಜ್ಞ ಅಪ್ರೆಂಟೀಸ್ — 105 ಹುದ್ದೆಗಳು
* ಪದವಿಧರ ಅಪ್ರೆಂಟಿಸ್ — 200 ಹುದ್ದೆಗಳು
ಭಾರತೀಯ ತೈಲ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಅರ್ಹತೆಗಳು :
ಶೈಕ್ಷಣಿಕ – ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಮುಗಿಸಿ ಐಟಿಐ ಪಾಸ್ ಆಗಿರಬೇಕು ಹಾಗೂ ಕೆಳಗಿನ ವಿಷಯಗಳಲ್ಲಿ ಪದವಿ ಮುಗಿಸಿರುವಂತವರು ಅರ್ಜಿ ಸಲ್ಲಿಸಬಹುದು.
BBA, ಬಿ. ಕಾಂ, ಬಿಎ, ಬಿ. ಎಸ್ ಸಿ ಪದವಿ ಮುಗಿಸಿರಬೇಕು.
ವಯೋಮಿತಿ — ಅರ್ಜಿ ಸಲ್ಲಿಸುವರು ಕನಿಷ್ಠ 18 ರಿಂದ 24 ವರ್ಷದ ವಯೋಮಿತಿಯಲ್ಲಿರಬೇಕು
Application Fee – ಮೊದಲೇ ತಿಳಿಸಿರುವಂತೆ ಈ ನೇಮಕಾತಿಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಅರ್ಜಿ ಸಲ್ಲಿಸುವವರು ಈ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ :
* ಅರ್ಜಿ ಸಲ್ಲಿಕೆ ಆರಂಭವಾಗಿರುವ ದಿನಾಂಕ : 02 ಆಗಸ್ಟ್ 2024
* ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕ : 19 ಆಗಸ್ಟ್ 2024
ಅರ್ಜಿಯನ್ನು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡುವುದರ ಮುಖಾಂತರ ಸಲ್ಲಿಸಿ: www.iocl.com
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: