ಸ್ವಿಟ್ಜರ್ ಲ್ಯಾಂಡ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆ ಖರೀದಿಸಿದ ಭಾರತೀಯ ಮೂಲದ ಬಿಲಿಯನೇರ್..!
ಸ್ವಿಟ್ಜರ್ ಲ್ಯಾಂಡ್ ನಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದನ್ನು ಭಾರತೀಯ ಮೂಲದ ಬಿಲಿಯನೇರ್ ಪಂಕಜ್ ಓಸ್ವಾಲ್ ಮತ್ತು ಅವರ ಪತ್ನಿ ರಾಧಿಕಾ ಓಸ್ವಾಲ್ ಖರೀದಿಸಿದ್ದಾರೆ.
ಜಿಂಗಿನ್ಸ್ ನ ಸುಂದರವಾದ ಸ್ವಿಸ್ ಗ್ರಾಮದಲ್ಲಿರುವ ವಿಲ್ಲಾ ವರಿ 4.3 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಓಸ್ವಾಲ್ ಸ್ವಿಟ್ಜರ್ಲೆಂಡ್‌ನಲ್ಲಿರುವ ಅದ್ದೂರಿ ಆಸ್ತಿಗಾಗಿ 200 ಮಿಲಿಯನ್ (ಅಂದಾಜು 1,649 ಕೋಟಿ) ಪಾವತಿಸಿದ್ದಾರೆ. ಇದು ವಿಶ್ವದ ಟಾಪ್ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.
ಹಿಂದೆ ಈ ಮನೆ ಗ್ರೀಕ್ ಶಿಪ್ಪಿಂಗ್ ಉದ್ಯಮಿ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು ಕ್ರಿಸ್ಟಿನಾ ಒನಾಸಿಸ್ ಒಡೆತನದಲ್ಲಿತ್ತು. ವಿಲ್ಲಾವನ್ನು ಭಾರತೀಯ ಮೂಲದ ಓಸ್ವಾಲ್ ಕುಟುಂಬ ಖರೀದಿಸಿದ ನಂತರ ಮರುವಿನ್ಯಾಸಗೊಳಿಸಲಾಯಿತು.
GQ ಮ್ಯಾಗಜಿನ್ ಪ್ರಕಾರ, ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕ್ಸ್ ಅವರು ಆಸ್ತಿಯನ್ನು ನವೀಕರಿಸುವ ಕಾರ್ಯವನ್ನು ನಿರ್ವಹಿಸಿದರು. 2016 ರಲ್ಲಿ ನಿಧನರಾದ ಓಸ್ವಾಲ್ ಆಗ್ರೋ ಮಿಲ್ಸ್ ಮತ್ತು ಓಸ್ವಾಲ್ ಗ್ರೀನ್‌ಟೆಕ್‌ನ ಸಂಸ್ಥಾಪಕ ಕೈಗಾರಿಕೋದ್ಯಮಿ ಅಭಯ್ ಕುಮಾರ್ ಓಸ್ವಾಲ್ ಪುತ್ರ ಪಂಕಜ್ ಓಸ್ವಾಲ್. ಪಂಕಜ್ ಓಸ್ವಾಲ್ ನೇತೃತ್ವದ ಓಸ್ವಾಲ್ ಗ್ರೂಪ್ ಗ್ಲೋಬಲ್, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ
ಭಾರತದಲ್ಲಿ ಬೆಳೆದ ಪಂಕಜ್ ಓಸ್ವಾಲ್, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತಿದ್ದಾರೆ. ರಾಧಿಕಾ ಓಸ್ವಾಲ್ ವಿವಾಹವಾದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಪಂಕಜ್ ಮತ್ತು ರಾಧಿಕಾ ಓಸ್ವಾಲ್ ಅವರ ಇಬ್ಬರು ಪುತ್ರಿಯರಾದ ವಸುಂಧರಾ ಓಸ್ವಾಲ್ ಪಿಆರ್ ಓ ಇಂಡಸ್ಟ್ರೀಸ್ PTE LTD ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಆಕ್ಸಿಸ್ ಮಿನರಲ್ಸ್‌ನಲ್ಲಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಿದಿ ಓಸ್ವಾಲ್ ಲಂಡನ್‌ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw