ವಿಶ್ವ ರಾಜಕೀಯದಲ್ಲಿ ಭಾರತೀಯರ ಪ್ರಾಬಲ್ಯ: ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣ ವಚನ ಸ್ವೀಕಾರ - Mahanayaka
11:19 AM Saturday 21 - September 2024

ವಿಶ್ವ ರಾಜಕೀಯದಲ್ಲಿ ಭಾರತೀಯರ ಪ್ರಾಬಲ್ಯ: ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣ ವಚನ ಸ್ವೀಕಾರ

16/09/2023

ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಅವರು ಪ್ರಮಾಣವಚನ ಸ್ವೀಕರಿಸಿದರು.‌ ಅಧ್ಯಕ್ಷರಾಗಿದ್ದ ಹಲೀಮಾ ಯಾಕೂಬ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 13 ರಂದು ಕೊನೆಗೊಂಡಿತ್ತು. ಈಗ ಥರ್ಮನ್ ಸಿಂಗಾಪುರದ 9ನೇ ಅಧ್ಯಕ್ಷರಾಗಿದ್ದಾರೆ. ಇವರಿಗೆ 66 ವರ್ಷ.

ಇದಕ್ಕೂ ಮುನ್ನ ಷಣ್ಮುಗರತ್ನಂ ಅವರು ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಜಯ ದಾಖಲಿಸಿದ್ದರು. ಅವರು ಚೀನಾದ ಕೋಕ್ ಸಾಂಗ್ ಮತ್ತು ಟಾನ್ ಕಿನ್ ಲಿಯಾನ್ ಅವರನ್ನು ದೊಡ್ಡ ಅಂತರದಿಂದ ಸೋಲಿಸಿದ್ದರು.

ಕೊಕ್‌ಗೆ ಶೇ.15.2 ಹಾಗೂ ತಾನ್‌ಗೆ ಶೇ.13.88ರಷ್ಟು ಮತಗಳು ಲಭಿಸಿವೆ. ಅದೇ ವೇಳೆ ಷಣ್ಮುಗರತ್ನಂ ಶೇ.70.4 ಅಂದರೆ 17,46,427 ಮತಗಳನ್ನು ಪಡೆದಿದ್ದಾರೆ. ಸೆಪ್ಟೆಂಬರ್ 1ರಂದು ಸಿಂಗಾಪುರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದಿತ್ತು.


Provided by

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಶ್ವದಾದ್ಯಂತ ಭಾರತದ ಧ್ವಜವನ್ನು ಹಾರಿಸುತ್ತಿರುವ ಭಾರತೀಯರ ಪಟ್ಟಿಗೆ ಥರ್ಮನ್ ಷಣ್ಮುಗರತ್ನಂ ಕೂಡ ಸೇರಿಕೊಂಡಿದ್ದಾರೆ.

ಅಮೆರಿಕ, ಇಂಗ್ಲೆಂಡ್ ಸೇರಿದಂತೆ 15 ದೇಶಗಳಲ್ಲಿ ಭಾರತೀಯ ಮೂಲದ 200ಕ್ಕೂ ಹೆಚ್ಚು ಜನರನ್ನು ನಾಯಕತ್ವ ವರ್ಗಕ್ಕೆ ಸೇರಿಸಲಾಗಿದೆ. ಇವರಲ್ಲಿ 60 ಮಂದಿ ಕ್ಯಾಬಿನೆಟ್ ಸಚಿವರವರೆಗಿನ ಸ್ಥಾನಗಳನ್ನು ಪಡೆದಿದ್ದಾರೆ. ಈ ಮೊದಲು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್, ಯುಎಸ್ ಎಂಪಿ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜೈಪಾಲ್, ಥಾನೇದಾರ್, ಮುಂತಾದ ಅನೇಕ ಹೆಸರುಗಳಿವೆ.

ಭಾರತೀಯರ ಪ್ರಭಾವವನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಥರ್ಮನ್ ಷಣ್ಮುಗರತ್ನಂ ಅವರ ಹೆಸರೂ ಸೇರ್ಪಡೆಯಾಗಿದೆ. ಅವರ ಅಜ್ಜ 19 ನೇ ಶತಮಾನದಲ್ಲಿ ತಮಿಳುನಾಡಿನಿಂದ ವಲಸೆ ಬಂದು ಸಿಂಗಾಪುರದಲ್ಲಿ ನೆಲೆಸಿದ್ದರು.

ಇತ್ತೀಚಿನ ಸುದ್ದಿ