ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ: ಅನಿವಾಸಿ ಭಾರತೀಯರಿಗೆ ಖುಷಿ

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದ್ದು ಇದರಿಂದಾಗಿ ಯುಎಇಯ ಒಂದು ದಿರ್ಹಮ್ ಮೌಲ್ಯವು 23 ರೂಪಾಯಿ 47 ಪೈಸೆಗೆ ಏರಿದೆ. ಇದರಿಂದಾಗಿ ಅನಿವಾಸಿ ಭಾರತೀಯರಿಗೆ ಭಾರಿ ಪ್ರಮಾಣದಲ್ಲಿ ಪ್ರಯೋಜನವಾಗಿದೆ. ತಮ್ಮಲ್ಲಿರುವ ಹಣವನ್ನು ಅವರು ಭಾರತಕ್ಕೆ ಬಾರಿ ಪ್ರಮಾಣದಲ್ಲಿ ಕಳುಹಿಸಿರುವುದಾಗಿಯೂ ವರದಿಯಾಗಿದೆ.
ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಹೊರಡಿಸಿದ ಬಳಿಕ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಇದರಿಂದಾಗಿ ರೂಪಾಯಿ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಯಿತು. ದಿರ್ ಹಮ್ ನ ಬೆಲೆ ಹೆಚ್ಚಾದ ಕಾರಣ ಅನಿವಾಸಿ ಭಾರತೀಯರು ತಮ್ಮಲ್ಲಿರುವ ಹಣವನ್ನು ಭಾರತಕ್ಕೆ ಕಳುಹಿಸಲು ಪೈಪೋಟಿ ನಡೆಸಿದ್ದಾರೆ. ಪಶ್ಚಿಮೇಶ್ಯ ಸಂಘರ್ಷ, ರಷ್ಯಾ ಮತ್ತು ಯುಕ್ರೇನ್ ನಡುವಿನ ಸಂಘರ್ಷಗಳು ಭಾರತೀಯ ರೂಪಾಯಿಯ ಬೆಲೆ ಕುಸಿಯುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಹಾಗೆಯೇ ಅದಾನಿ ವಿರುದ್ಧ ಅಮೆರಿಕನ್ ನ್ಯಾಯಾಲಯ ಹೊರಡಿಸಿದ ಅರೆಸ್ಟ್ ವಾರೆಂಟಿನಿಂದಲೂ ರೂಪಾಯಿಯ ಬೆಲೆಯ ಮೇಲೆ ಪರಿಣಾಮ ಬೀರಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj