ಇಂಗ್ಲೆಂಡ್ ನಲ್ಲಿ ನಾಪತ್ತೆಯಾದ ವಿದ್ಯಾರ್ಥಿ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ..! - Mahanayaka
5:11 AM Saturday 21 - December 2024

ಇಂಗ್ಲೆಂಡ್ ನಲ್ಲಿ ನಾಪತ್ತೆಯಾದ ವಿದ್ಯಾರ್ಥಿ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ..!

01/12/2023

ಇಂಗ್ಲೆಂಡ್‌ನಲ್ಲಿ ಕಳೆದ ತಿಂಗಳ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಲಂಡನ್‌ನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಿತಕುಮಾರ್ ಪಟೇಲ್ (23) ಮೃತ ವಿದ್ಯಾರ್ಥಿ. ಮಿತಕುಮಾರ್‌ ಉನ್ನತ ಶಿಕ್ಷಣಕ್ಕಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಲಂಡನ್‌ಗೆ ಹೋಗಿದ್ದರು. ನವೆಂಬರ್ 17ರಂದು ಲಂಡನ್ ನಿವಾಸದಲ್ಲಿ ಮಿತಕುಮಾರ್‌ ವಾಕಿಂಗ್‌ನಿಂದ ಆತ ಮರಳಿ ಬಂದಿರಲಿಲ್ಲ. ಆಗ ಆತನ ಬಗ್ಗೆ ಆತಂಕ ಶುರುವಾಯಿತು. ನಾಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅವರ ಶವ ನದಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಸಾವು ಅನುಮಾನಾಸ್ಪದ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ