ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಸೇನೆಯಲ್ಲಿ ಭಾರತೀಯರ ಹೋರಾಟ: ಮೋದಿ ಪ್ರಸ್ತಾಪ - Mahanayaka
4:40 AM Thursday 14 - November 2024

ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಸೇನೆಯಲ್ಲಿ ಭಾರತೀಯರ ಹೋರಾಟ: ಮೋದಿ ಪ್ರಸ್ತಾಪ

13/07/2024

ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಸೇನೆಯಲ್ಲಿ ಭಾರತೀಯರು ಹೋರಾಡುತ್ತಿರುವ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಭೇಟಿ ವೇಳೆ ಪ್ರಸ್ತಾಪಿಸಿದ್ದಾರೆ. ಹೀಗಿದ್ದೂ ತನಗೆ ಯುದ್ಧರಂಗಕ್ಕೆ ಮರಳುವಂತೆ ಸೂಚಿಸಲಾಗಿದೆ ಎಂದು ಪಂಜಾಬ್ ವ್ಯಕ್ತಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ತಾಯ್ನಾಡಿಗೆ ಮರಳುವ ತಮ್ಮ ಆಸೆಗೆ ರಷ್ಯಾ ಸೇನೆ ತಣ್ಣೀರೆರಚಿದೆ ಎಂದು ಅವರು ಹೇಳಿದ್ದಾರೆ.

ಪಂಜಾಬ್‍ನ ಗುರುದಾಸಪುರದ ಗಗನದೀಪ್ ಸಿಂಗ್ ಸೇರಿದಂತೆ ಹಲವು ಮಂದಿ ಭಾರತೀಯರು ತಮ್ಮನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಸೇನೆಗೆ ಸೇರಿಸಿಕೊಂಡು ಬಲವಂತವಾಗಿ ಯುದ್ಧಕಣಕ್ಕೆ ತಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಭಾರತಕ್ಕೆ ವಾಪಸ್ಸಾಗಲು ಬಯಸುವ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ ನೀಡಿದ್ದರು.

ತಮ್ಮ ಸೇನೆಯ ಕಮಾಂಡರ್ ಸರ್ಕಾರದಿಂದ ಬಿಡುಗಡೆಗೆ ಆದೇಶ ಪಡೆಯಲು ನಿರಾಕರಿಸಿದ್ದಾರೆ ಎಂದು ಗಗನದೀಪ್ ಸಿಂಗ್ ಅವರು ಹೇಳಿದ್ದಾರೆ. “ಮೋದಿ ವಾಪಸ್ಸಾದ ಬಳಿಕ, ಇಡೀ ತಂಡ ಯುದ್ಧರಂಗಕ್ಕೆ ತೆರಳುತ್ತಿದೆ. ಈ ತಂಡದಲ್ಲಿ ಇರುವಂತೆ ನನಗೆ ಸೂಚಿಸಲಾಗಿದೆ. ರಷ್ಯಾದ ಜತೆ ಭಾರತ ಸರ್ಕಾರ ಮಾತನಾಡಿ, ಭಾರತಕ್ಕೆ ಮರಳಲು ಅನುವು ಮಾಡಿಕೊಡಬೇಕು” ಎಂದು ಅವರು ಹೇಳಿದ್ದಾರೆ. ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಅವರು ಯುದ್ಧರಂಗಕ್ಕೆ ಅನಿವಾರ್ಯವಾಗಿ ಮರಳಬೇಕಿದೆ.




 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ