ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಇಂಟೆಲಿಜೆನ್ಸ್ ಬ್ಯುರೋ ಸಿಬ್ಬಂದಿ ಅರೆಸ್ಟ್
ಕಳೆದ ತಿಂಗಳು ನಾಗಪುರದಿಂದ ಕೊಲ್ಕತ್ತಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವು ಬಾಂಬ್ ಭೀತಿಯ ಕರೆಯಿಂದಾಗಿ ತುರ್ತಾಗಿ ಲ್ಯಾಂಡಿಂಗ್ ಆಗಿತ್ತು. ಆ ಬಳಿಕ ಪೊಲೀಸರು ಅನಿಮೇಶ್ ಮಂಡಲ್ ಎಂಬ 44 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದರು. ಆದರೆ ಈತ ಇಂಟೆಲಿಜೆನ್ಸ್ ಬ್ಯುರೋ ಅಥವಾ ಐಬಿಯ ಅಧಿಕಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಪುರದಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ರ್‍ಯಾಂಕಿನ ಐಬಿ ಅಧಿಕಾರಿಯಾಗಿ ಈತ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
187 ಮಂದಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವು ತುರ್ತು ಭೂ ಸ್ಪರ್ಶ ಮಾಡುವಂತೆ ಸುಳ್ಳು ಮಾಹಿತಿಯನ್ನು ಒದಗಿಸಿದಕ್ಕಾಗಿ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ನವೆಂಬರ್ 14ರಂದು ಇಂಡಿಗೋ ವಿಮಾನವು ಹಾರಾಟ ನಡೆಸಿದ ಬಳಿಕ ಈ ವಿಮಾನದಲ್ಲಿ ಬಾಂಬ್ ಇರುವುದಾಗಿ ಈ ಮಂಡಲ್ ವಿಮಾನ ಸಿಬ್ಬಂದಿಗಳಿಗೆ ತಿಳಿಸಿದ್ದ ವಿಮಾನ ತುರ್ತು ಭೂ ಸ್ಪರ್ಶವಾದ ಬಳಿಕ ಬಾಂಬ್ ಗಾಗಿ ತಪಾಸಣೆ ನಡೆಸಲಾಗಿತ್ತು ಮತ್ತು ಈ ಮಾಹಿತಿ ಸುಳ್ಳು ಎಂದು ಸ್ಪಷ್ಟವಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj