ವಿಮಾನಯಾನ ಕ್ಷೇತ್ರದಲ್ಲೇ ಅತಿದೊಡ್ಡ ಒಪ್ಪಂದಕ್ಕೆ ಸಹಿ: ಏನದು ಆ ನವ ಒಪ್ಪಂದ..?
ವಿಮಾನಯಾನ ಕ್ಷೇತ್ರದಲ್ಲೇ ಅತಿದೊಡ್ಡದು ಎನ್ನಲಾದ ಒಪ್ಪಂದಕ್ಕೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಸಹಿ ಹಾಕಿದೆ.
ಏರ್‌ಬಸ್‌ನಿಂದ 50 ಶತಕೋಟಿ ಡಾಲರ್ ವೆಚ್ಚದಲ್ಲಿ 500 ‘A320’ ವಿಮಾನಗಳನ್ನು ಖರೀದಿಸುವುದಾಗಿ ಇಂಡಿಗೋ ಇಂದು ಘೊಷಿಸಿದೆ. ಈ ಒಪ್ಪಂದಕ್ಕೆ ಇಂಡಿಗೋ ಕಂಪನಿಗೆ ಭಾರೀ ರಿಯಾಯಿತಿಯ ಕೊಡುಗೆ ದೊರೆತಿದೆ. ಟಾಟಾ ಗ್ರೂಪ್ ಇತ್ತೀಚೆಗೆ ಏರ್ ಇಂಡಿಯಾಗೆ 470 ವಿಮಾನಗಳನ್ನು ಖರೀದಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಈವರೆಗಿನ ಅತಿದೊಡ್ಡ ವಿಮಾನ ಖರೀದಿ ಒಪ್ಪಂದವಾಗಿತ್ತು. ಇದೀಗ ಟಾಟಾ ಗ್ರೂಪ್ ಅನ್ನು ಇಂಡಿಗೋ ಮೀರಿಸಿದೆ.
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಏರ್ ಶೋದಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಎಂಡಿ ರಾಹುಲ್ ಭಾಟಿಯಾ ನೇತೃತ್ವದ ಇಂಡಿಗೋ ಪ್ರವರ್ತಕರ ತಂಡ ಮತ್ತು ಏರ್ಬಸ್ನ ಸಿಇಒ ಗುಯಿಲೌಮ್ ಫೌರಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
2006 ರಲ್ಲಿ ಆರಂಭವಾದಾಗಿನಿಂದ ಇಂಡಿಗೋ ಕಂಪನಿಯು ಈವರೆಗೆ ಏರ್‌ಬಸ್‌ನಿಂದ ಒಟ್ಟು 1,330 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಸದ್ಯ ಇಂಡಿಗೋದ 310 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಇಂಡಿಗೋ ಪ್ರಕಾರ, ಏರ್ಬಸ್ನ ‘A320’ ವಿಮಾನದಿಂದ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.
ಕೆಲವು ತಿಂಗಳುಗಳ ಹಿಂದಷ್ಟೇ ಫ್ರಾನ್ಸ್ ದೇಶದ ಏರ್ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಟಾಟಾ ಗ್ರೂಪ್ನ ಏರ್ ಇಂಡಿಯಾ ಸಂಸ್ಥೆ ಅದಾಗಿ ಕೆಲವು ದಿನಗಳ ನಂತರ ಅಮೆರಿಕದ ಬೋಯಿಂಗ್ನಿಂದ 220 ವಿಮಾನಗಳನ್ನು ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿಹಾಕಿತ್ತು. ಇದರೊಂದಿಗೆ ಒಟ್ಟು 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಂತಾಗಿತ್ತು. ಇದು ದೇಶದ ಇತಿಹಾಸದಲ್ಲಿ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ಎನ್ನಲಾಗಿತ್ತು. ಇದೀಗ ಇಂಡಿಗೋ ಇದನ್ನು ಮೀರಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw