ಇಂದಿರಾ ಕ್ಯಾಂಟೀನ್ ನ್ನು ಇಸ್ಕಾನ್ ಸಂಸ್ಥೆಗೆ ವಹಿಸಿದ ರಾಜ್ಯ ಸರ್ಕಾರ!
ಬೆಂಗಳೂರು: ಇಂದಿರಾ ಕ್ಯಾಂಟೀನ್ ಇಸ್ಕಾನ್ ಸಂಸ್ಥೆಗೆ ವಹಿಸಲಾಗಿದ್ದು, ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ಕೂಡ ದುಬಾರಿಯಾಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.
ಈ ಕುರಿತಂತೆ ಮಾಹಿತಿ ನೀಡಿದ ಬಿಬಿಎಂಪಿ ಹಣಕಾಸು ವಿಭಾಗ ಪಾಲಿಕೆ ವ್ಯಾಪ್ತಿಯಲ್ಲಿರೋ ಎಲ್ಲಾ ಕ್ಯಾಂಟೀನ್ ಗಳಲ್ಲಿ ಇಸ್ಕಾನ್ ಊಟ ಲಭ್ಯವಾಗಲಿದೆ ಎಂದಿದೆ. ಬಿಬಿಎಂಪಿಯ ವ್ಯಾಪ್ತಿಯಲ್ಲಿ 174 ಇಂದಿರಾ ಕ್ಯಾಂಟೀನ್‌ಗಳಿದ್ದು ಅಷ್ಟು ಕ್ಯಾಂಟೀನ್ ಗಳಲ್ಲೂ ಇಸ್ಕಾನ್ ಊಟ ಸಿಗಲಿದೆ ಎನ್ನಲಾಗುತ್ತಿದೆ.
ಇಸ್ಕಾನ್‌ನಿಂದ ತರಿಸಲಾಗುವ ಪ್ರತಿದಿನದ ಊಟಕ್ಕೆ 78 ರೂಪಾಯಿ ವೆಚ್ಚ ತಗುಲಲಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಇಷ್ಟು ದಿನ 55.30 ರೂಪಾಯಿ ವೆಚ್ಚ ತಗುಲುತ್ತಿತ್ತು. 2017 ರಲ್ಲಿ ನಿಗದಿಪಡಿಸಲಾಗಿದ್ದ ದರದಲ್ಲಿಯೇ ಆಹಾರವನ್ನು ನೀಡಲಾಗುತ್ತಿತ್ತು. ಇದೀಗ ಇಸ್ಕಾನ್ ಊಟಕ್ಕಾಗಿ ಹೆಚ್ಚಿನ ದರವನ್ನು ಪಾವತಿಸುವುದರಿಂದ ಸಾರ್ವಜನಿಕರಿಗೂ ದರದಲ್ಲಿ ಅಲ್ಪಮಟ್ಟಿಗೆ ಏರಿಕೆಯನ್ನು ಮಾಡುವುದು ಬಿಬಿಎಂಪಿ ಅನಿವಾರ್ಯವಾಗಲಿದೆ.
ಈ ಹಿಂದೆ ಇಂದಿರಾ ಕ್ಯಾಂಟೀನ್ ನ್ನು ಗುತ್ತಿಗೆಗೆ ಪಡೆದುಕೊಂಡಿದ್ದವರು ಸರಿಯಾಗಿ ನಿರ್ವಹಣೆ ಮಾಡದೇ ಊಟದ ಗುಣಮಟ್ಟನ್ನೂ ಕಾಯ್ದುಕೊಂಡಿರಲಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದರೂ, ಕ್ರಮಕೈಗೊಳ್ಳಲು ಸರ್ಕಾರ ಉದಾಸೀನ ತೋರ್ಪಡಿಸಿತ್ತು. ಇದರಿಂದಾಗಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್ ನಿಂದ ದೂರವಿರಲು ಆರಂಭಿಸಿದ್ದರು.
ಊಟ ಯಾರೇ ತಯಾರಿಸಲಿ, ಶುಚಿಯಾದ ಊಟ ಅತ್ಯಂತ ಕಡಿಮೆ ಬೆಲೆಗೆ ಸಿಗಬೇಕು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತೀ ಕಡಿಮೆ ದರದಲ್ಲಿ ಊಟ ನೀಡಿತ್ತು. ಬಿಜೆಪಿ ಆಡಳಿತದಲ್ಲಿ ಎಲ್ಲವೂ ದುಬಾರಿ ಎನ್ನುವ ಆರೋಪಗಳ ಮಧ್ಯೆ ಇಂದಿರಾ ಕ್ಯಾಂಟೀನ್ ಕೂಡ ದುಬಾರಿಯಾಗಬಾರದು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಗ್ರರ ಗುಂಡಿಗೆ ಬಲಿಯಾದ ಟಿಕ್ ಟಾಕ್ ಸ್ಟಾರ್ ಅಮರೀನ್ ಭಟ್!
ವೇಶ್ಯಾವಾಟಿಕೆ ಕಾನೂನುಬದ್ಧ ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ: ಸುಪ್ರೀಂ ಕೋರ್ಟ್ ಹೇಳಿದ್ದೇನು?