ಭೀಕರ ಜ್ವಾಲಾಮುಖಿ ಸ್ಫೋಟ: 13 ಮಂದಿ ಸಾವು, ಗ್ರಾಮ ಬಿಟ್ಟು ಓಡಿದ ಜನ - Mahanayaka

ಭೀಕರ ಜ್ವಾಲಾಮುಖಿ ಸ್ಫೋಟ: 13 ಮಂದಿ ಸಾವು, ಗ್ರಾಮ ಬಿಟ್ಟು ಓಡಿದ ಜನ

indonesia volcano
05/12/2021

ಜಕಾರ್ತ: ಭೀಕರ ಜ್ವಾಲಾಮುಖಿ ಸ್ಫೋಟದಿಂದ 13 ಮಂದಿ ಮೃತಪಟ್ಟು ಹಲವಾರು ಜನರು ನಾಪತ್ತೆಯಾಗಿರುವ ಘಟನೆ ಇಂಡೊನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದ ಮೌಂಟ್ ಸಿಮೇರುವಿನಲ್ಲಿ ಶನಿವಾರ ನಡೆದಿದೆ.

ಸಿಮೇರು ಸಮೀಪದ ಲುಮಾಜಾಂಗ್‌ ನ ಕೆರೊಬೊಕನ್ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಇದೇ ಪ್ರದೇಶದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಲಾವ ರಸ ಉಕ್ಕಿ ಹರಿದಿದ್ದು, ಜನರನ್ನು ಬಲಿ ಪಡೆದಿದೆ.

ಇಲ್ಲಿನ ನಿವಾಸಿಗಳ ಮನೆಗಳು ನಾಶವಾಗಿದೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆಯೇ ಈ ಗ್ರಾಮದ ಪಕ್ಕದ ಗ್ರಾಮದ ನಿವಾಸಿಗಳು ಆತಂಕದಿಂದ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ. ಸದ್ಯ ಕೆರೊಬೊಕನ್‌ ನಲ್ಲಿ ರಕ್ಷಣಾ ಕಾರ್ಯಾಚರಣೆ ಯನ್ನು ತೀವ್ರಗೊಳಿಸಲಾಗಿದೆ. 13 ಮೃತದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಸುಮಾರು 41 ಮಂದಿಗೆ ಭೀಕರ ಗಾಯವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂದು ಅಗಲಿದ ಹಿರಿಯ ನಟ ಶಿವರಾಮ್ ಅವರ ಅಂತ್ಯಕ್ರಿಯೆ

ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಯುವಕ!

ಭೀಕರ ಕೊಲೆ: ಒಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ

ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್ 

ಬದುಕಿನ ದಾರಿ ಮುಗಿಸಿ ಹೊರಟೇ ಬಿಟ್ಟರು: ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜೊತೆಗೆ ನಟಿಸಿದ್ದ ಶಿವರಾಮಣ್ಣ

ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ನಗರ ಪಾಲಿಕೆ: ಕತ್ತುಕೊಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ

ಇತ್ತೀಚಿನ ಸುದ್ದಿ