30 ಗಂಟೆಗಳ ಕಾಲ ಕಾರ್ಯಾಚರಣೆ: ಕೊನೆಗೂ 36 ಭಾರತೀಯ ಮೀನುಗಾರರ ರಕ್ಷಣೆ - Mahanayaka

30 ಗಂಟೆಗಳ ಕಾಲ ಕಾರ್ಯಾಚರಣೆ: ಕೊನೆಗೂ 36 ಭಾರತೀಯ ಮೀನುಗಾರರ ರಕ್ಷಣೆ

thamilu nadu
29/07/2023

ತಮಿಳುನಾಡು ಕರಾವಳಿಯಿಂದ ಸುಮಾರು 130 ನಾಟಿಕಲ್ ಮೈಲಿ ದೂರದ ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಪಡೆಯ ಹಡಗು ಖಂಜರ್ ಸುರಕ್ಷಿತವಾಗಿ ವಾಪಸ್ ಕರೆತಂದಿದೆ. 30 ಗಂಟೆಗಳಿಗೂ ಹೆಚ್ಚು ಕಾಲ ಐಎನ್ ಎಸ್ ಖಂಜಾರ್ ಕಾರ್ಯಾಚರಣೆ ನಡೆಸಿ ಮೀನುಗಾರರು ಹಾಗೂ ಮೂರು ಮೀನುಗಾರಿಕಾ ಹಡಗುಗಳನ್ನು ರಕ್ಷಿಸಿದೆ.


Provided by

ಮೀನುಗಾರರು 3 ಮೀನುಗಾರಿಕಾ ಹಡಗುಗಳಲ್ಲಿ ತೆರಳಿದ್ದು, 30 ಗಂಟೆಗಳ ಕಾರ್ಯಾಚರಣೆಯ ಮೂಲಕ ಮೀನುಗಾರರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಖಂಜಾರ್ ನೌಕೆ ಸಮುದ್ರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ತಮಿಳುನಾಡು ಕರಾವಳಿಯಿಂದ ಸರಿಸುಮಾರು 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೂರು ಮೀನುಗಾರಿಕಾ ಹಡಗುಗಳಾದ ಶಬರನಾಥನ್, ಕಲೈವಾಣಿ ಮತ್ತು ಮಿಸಾಮಿ ಪತ್ತೆಯಾಗಿದೆ.

36 ಮೀನುಗಾರರು ಮೂರು ಹಡಗುಗಳಲ್ಲಿ ತಮಿಳುನಾಡಿನ ನಾಗಪಟ್ಟಣದಿಂದ ತೆರಳಿದ್ದ ವೇಳೆ ಹಡಗಿನ ಇಂಧನ ಖಾಲಿಯಾಗಿದ್ದಲ್ಲದೇ ಪ್ರತಿಕೂಲ ಹವಾಮಾನ ಹಾಗೂ ಎಂಜಿನ್ ಸ್ಥಗಿತಗೊಂಡ ಕಾರಣ ಎರಡು ದಿನಗಳಿಂದ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎಂದು ಕಮಾಂಡರ್ ಮಧ್ವಲ್ ಹೇಳಿದ್ದಾರೆ.
ಪ್ರತಿಕೂಲ ಹವಾಮಾನದ ನಡುವೆಯೂ 30 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಸುರಕ್ಷಿತವಾಗಿ ಚೆನ್ನೈ ಬಂದರಿಗೆ ಕರೆತರಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ