ʼಗೋರಕ್ಷಕರʼ ಹಿಂಸಾತ್ಮಕ ಕೃತ್ಯಗಳಿಗೆ ಇನ್ಸ್ಟಾಗ್ರಾಮ್ ಉತ್ತೇಜನ ನೀಡುತ್ತಿದೆ: ಚಿಂತಕರ ಚಾವಡಿ ʼಥಿಂಕ್ ಟ್ಯಾಂಕ್ʼ ಆರೋಪ - Mahanayaka
9:05 PM Wednesday 20 - November 2024

ʼಗೋರಕ್ಷಕರʼ ಹಿಂಸಾತ್ಮಕ ಕೃತ್ಯಗಳಿಗೆ ಇನ್ಸ್ಟಾಗ್ರಾಮ್ ಉತ್ತೇಜನ ನೀಡುತ್ತಿದೆ: ಚಿಂತಕರ ಚಾವಡಿ ʼಥಿಂಕ್ ಟ್ಯಾಂಕ್ʼ ಆರೋಪ

20/11/2024

ʼಗೋರಕ್ಷಕರʼ ಹಿಂಸಾತ್ಮಕ ಕೃತ್ಯಗಳಿಗೆ ಇನ್ಸ್ಟಾಗ್ರಾಮ್ ಉತ್ತೇಜನ ನೀಡುತ್ತಿದೆ ಎಂದು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ʼಥಿಂಕ್ ಟ್ಯಾಂಕ್ʼ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಂಘಟಿತ ದ್ವೇಷದ ಕುರಿತ ಅಧ್ಯಯನದಲ್ಲಿ ಇದನ್ನು ತಿಳಿಸಲಾಗಿದೆ. ʼಗೋರಕ್ಷಕರʼ ಹಿಂಸಾತ್ಮಕ ಪೋಸ್ಟ್ ಗಳನ್ನು ತೆಗೆದುಹಾಕಲು ಇನ್ಸ್ಟಾಗ್ರಾಮ್ ವಿಫಲವಾಗಿದೆ ಮತ್ತು ಗೋರಕ್ಷಕರಿಗೆ ನಿಧಿ ಸಂಗ್ರಹಿಸಲು ವೇದಿಕೆಯನ್ನು ಕಲ್ಪಿಸಿದೆ ಎಂದು ತನ್ನ ಅಧ್ಯಯನ ವರದಿ ತಿಳಿಸಿದೆ.

ಸಭೆಗೆ ಗೈರುಹಾಜರಾದ ಸಂಬಂಧ ಸಿಎಂ ಕಾರ್ಯಾಲಯದಿಂದ ಸಚಿವರೂ ಸೇರಿದಂತೆ 11 ಮಂದಿ ಎನ್ ಡಿಎ ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಸೇರಿದ ಜನರ ಹಿತರಕ್ಷಣೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸಿಎಂ ಬಿರೇನ್ ಸಿಂಗ್ ವಿಡಿಯೊ ಸಂದೇಶ ನೀಡಿದ್ದಾರೆ.

60 ಸದಸ್ಯಬಲದ ವಿಧಾನಸಭೆಯಲ್ಲಿ ಎನ್ ಡಿಎ 53 ಶಾಸಕರನ್ನು ಹೊಂದಿದೆ. ಅದರಲ್ಲಿ ಎನ್ ಪಿಪಿಯ ಏಳು, ನಾಗಾ ಪೀಪಲ್ಸ್ ಫ್ರಂಟ್ ನ ಐದು, ಜೆಡಿಯುನ ಒಬ್ಬರು ಶಾಸಕರು ಮತ್ತು ಮೂವರು ಪಕ್ಷೇತರರು ಸೇರಿದ್ದಾರೆ. ಬಿಜೆಪಿಯ 37 ಶಾಸಕರ ಪೈಕಿ ಏಳು ಮಂದಿ ಕುಕಿ ಸಮುದಾಯಕ್ಕೆ ಸೇರಿದವರು. ಈ ಎಲ್ಲರೂ ಸಭೆಗೆ ಗೈರುಹಾಜರಾಗಿದ್ದಾರೆ. ಅಚ್ಚರಿಯ ಅಂಶವೆಂದರೆ ಎನ್ ಪಿಪಿ ಬೆಂಬಲ ವಾಪಾಸು ಪಡೆದರೂ, ಪಕ್ಷದ ಏಳು ಶಾಸಕರ ಪೈಕಿ 4 ಮಂದಿ ಸಿಎಂ ಸಭೆಗೆ ಹಾಜರಾಗಿದ್ದರು.

ಜಿರಿಬಾಮ್ ನಲ್ಲಿ ಆಸರೆ ಪಡೆದಿದ್ದ ಮೈತೈ ಸಮುದಾಯಕ್ಕೆ ಸೇರಿದ ಆರು ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾದ ಕುಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು.




ʼಥಿಂಕ್ ಟ್ಯಾಂಕ್ʼ ವರದಿಯ ಪ್ರಕಾರ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ “ಗೋ ರಕ್ಷಣೆ” ನೆಪದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಗುಂಪು ಹತ್ಯೆಗಳು ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ಯುವ ಬಳಕೆದಾರರನ್ನು ಹೊಂದಿರುವ ಇನ್ಸ್ಟಾಗ್ರಾಮ್ ಈ ಹಿಂಸಾತ್ಮಕ ಗುಂಪುಗಳಿಗೆ ನೇಮಕಾತಿ ಮತ್ತು ನಿಧಿಸಂಗ್ರಹಣೆಯ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದೆ.

ʼಥಿಂಕ್ ಟ್ಯಾಂಕ್ʼ ಈ ಕುರಿತು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ 1,023 Instagram ಖಾತೆಗಳನ್ನು ವಿಶ್ಲೇಷಿಸಿದೆ. ಈ ಖಾತೆಗಳಲ್ಲಿ ಹಂಚಿಕೊಂಡ 30% ವಿಡಿಯೋಗಳಲ್ಲಿ ಗೋರಕ್ಷಕರು ಜಾನುವಾರುಗಳನ್ನು ಸಾಗಿಸುವ ಜನರ ವಿರುದ್ಧ ದೈಹಿಕ ಹಿಂಸಾಚಾರದಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತರು ಮುಸ್ಲಿಮರಾಗಿರುತ್ತಾರೆ.

ಇಂತಹ ದ್ವೇಷ ಹಂಚುವ ಖಾತೆಗಳಲ್ಲಿ 95% ಖಾತೆಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಸೇರಿದ್ದಾಗಿದೆ. ಇದರಲ್ಲಿ ಹರ್ಯಾಣ ಮೊದಲ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ʼ ಈ ವಿಡಿಯೋಗಳು ಹೆಚ್ಚಿನ ವೀಕ್ಷಣೆಯಾಗಿರುವುದನ್ನು ಅಧ್ಯಯನವು ಪತ್ತೆ ಹಚ್ಚಿದೆ.

ಇದಲ್ಲದೆ ಇಷ್ಟೆಲ್ಲಾ ದ್ವೇಷದ ಪೋಸ್ಟ್ ಗಳನ್ನು ಮಾಡಲಾಗುತ್ತಿದ್ದರೂ, Instagram ನಿಯಮಗಳ ಸ್ಪಷ್ಟ ಉಲ್ಲಂಘನೆ ಕಂಡು ಬರುತ್ತಿದ್ದರೂ Instagram ಇಂತಹ ದ್ವೇಷದ ಯಾವುದೇ ಪೋಸ್ಟ್ಗಳನ್ನು ತೆಗೆದುಹಾಕಿಲ್ಲ, ನಿರ್ಬಂಧಿಸಿಲ್ಲ ಎಂದು ವರದಿಯು ಬಹಿರಂಗಗೊಳಿಸಿದೆ

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ