ಮೋದಿಯವರು ‘ಭಾರತ್ ಮಾತಾ ಕಿ ಜೈ’ ಹೇಳುವ ಬದಲು ʼಅದಾನಿಗೆ ಜೈʼ ಅನ್ನಲಿ: ಅದಾನಿಗಾಗಿ ಮಾತ್ರ ಕೆಲಸ ಮಾಡುವುದರಿಂದ ಜಾತಿ ಗಣತಿ ಮಾಡಲು ಮೋದಿಗೆ ಸಾಧ್ಯವಿಲ್ಲ ಎಂದ ರಾಹುಲ್ ಗಾಂಧಿ - Mahanayaka

ಮೋದಿಯವರು ‘ಭಾರತ್ ಮಾತಾ ಕಿ ಜೈ’ ಹೇಳುವ ಬದಲು ʼಅದಾನಿಗೆ ಜೈʼ ಅನ್ನಲಿ: ಅದಾನಿಗಾಗಿ ಮಾತ್ರ ಕೆಲಸ ಮಾಡುವುದರಿಂದ ಜಾತಿ ಗಣತಿ ಮಾಡಲು ಮೋದಿಗೆ ಸಾಧ್ಯವಿಲ್ಲ ಎಂದ ರಾಹುಲ್ ಗಾಂಧಿ

19/11/2023

ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೌತಮ್‌ ಅದಾನಿ ವಿರುದ್ಧ ಮತ್ತೆ ತಮ್ಮ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿಯವರು ‘ಭಾರತ್ ಮಾತಾ ಕಿ ಜೈ’ ಹೇಳುವ ಬದಲು ʼಅದಾನಿಗೆ ಜೈʼ ಎನ್ನಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಅವರು ಕೈಗಾರಿಕೋದ್ಯಮಿ ಅದಾನಿಯಂತಹ ವ್ಯಕ್ತಿಗಳ ಕೆಲಸಗಳನ್ನು ಮಾತ್ರ ಮಾಡುತ್ತಾರೆ. ಜನರ ಜೇಬಿನಿಂದ ತೆಗೆದ ಹಣದಿಂದ ಅದಾನಿಯಂತಹ ಕೈಗಾರಿಕೋದ್ಯಮಿಗಳ 14 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗುತ್ತದೆ. ಪ್ರಧಾನಿ ಮೋದಿ ಅವರ ಮುಖ ಟಿವಿಯಲ್ಲಿ ಕಾಣಿಸುವಾಗ ಅದಾನಿಯಂತಹವರ 14 ಲಕ್ಷ ಸಾಲ ಮನ್ನಾ ಆಗುತ್ತದೆ. ಇದರಲ್ಲಿ ನಷ್ಟ ಜನರಿಗೆ ಮಾತ್ರ ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿಯವರು ಅದಾನಿಗಾಗಿ ಮಾತ್ರ ಕೆಲಸ ಮಾಡುವುದರಿಂದ ಜಾತಿ ಗಣತಿ ಮಾಡಲು ಅವರಿಂದ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಈ ಕೆಲಸ ಮಾಡಲು ರಾಹುಲ್‌ ಗಾಂಧಿಗೆ ಹಾಗೂ ಕಾಂಗ್ರೆಸ್ ಗೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ