ಅಂತರ್ಜಾತಿ ವಿವಾಹ | ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ಏನು ಗೊತ್ತಾ? - Mahanayaka
9:25 AM Thursday 14 - November 2024

ಅಂತರ್ಜಾತಿ ವಿವಾಹ | ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ಏನು ಗೊತ್ತಾ?

10/02/2021

ಮುಂಬೈ: ವಯಸ್ಕ ಹುಡುಗಿಯರು ತಮಗಿಷ್ಟವಾದವರನ್ನು ಮದುವೆಯಾಗಬಹುದು ಎಂದು  ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣವೊಂದರ ವಿಚಾರಣೆಯ ವೇಳೆ ಕೋರ್ಟ್ ಈ ತೀರ್ಪು ನೀಡಿದೆ.

ವ್ಯಕ್ತಿಯೋರ್ವನ 19 ವರ್ಷದ ಮಗಳಿಗೆ ನಿಶ್ಚಿತಾರ್ಥವಾಗಿತ್ತು. ಈ ನಡುವೆ ಯುವತಿ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಜಾತಿಯ ಮದ ತಲೆಗೆ ತುಂಬಿಕೊಂಡಿದ್ದ ತಂದೆ ಬಳಿಯಲ್ಲಿ ಈ ವಿಚಾರ ಹೇಳಲು ಭಯಭೀತಳಾದ ಯುವತಿ ಮನೆ ಬಿಟ್ಟು ಅನ್ಯ ಜಾತಿಯ ಯುವಕನ ಜೊತೆಗೆ ಪರಾರಿಯಾಗಿದ್ದಾಳೆ.

ಮಗಳು ನಾಪತ್ತೆಯಾಗಿದ್ದರಿಂದ ಆಕ್ರೋಶಗೊಂಡ ತಂದೆ ಪೊಲೀಸರಿಗೆ ದೂರು ನೀಡಿದ್ದಾನೆ. ಮರು ದಿನ ಆತನ ಮಗಳು ಬೇರೆ ಜಾತಿಯ ಯುವಕನೊಂದಿಗೆ  ಬಂದು ನಿಂತಿದ್ದಾಳೆ. ಅಲ್ಲದೇ ಆಕೆ ಈಗಾಗಲೇ ಆ ಯುವಕನನ್ನು ಮದುವೆಯಾಗಿದ್ದಾಳೆ. ಹಾಗಾಗಿ ಆಕೆಯ ಪತಿಯ ಮನೆಯಲ್ಲಿ ಆಕೆ ಇದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ತಿಳಿಸಲಾಗಿತ್ತು.

ಇಷ್ಟಾದರೂ ಬುದ್ಧಿ ಕಲಿಯದ ತಂದೆ, ಬಾಂಬೆ ಹೈಕೋರ್ಟ್ ವರೆಗೆ ಈ ಪ್ರಕರಣವನ್ನು ಕೊಂಡು ಹೋಗಿದ್ದಾನೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ವಯಸ್ಕ ಹುಡುಗಿಯರು ತಮಗಿಷ್ಟವಾದವರನ್ನು ಮದುವೆಯಾಗಬಹುದು ಎಂದು ತೀರ್ಪು ನೀಡಿದೆ. ಅಲ್ಲದೇ ಸಮಾಜದಲ್ಲಿ ಏಕತೆಯನ್ನು ಸಾಧಿಸಲು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದೆ.




ಇತ್ತೀಚಿನ ಸುದ್ದಿ