ಇಂಟರ್ ನೆಟ್ ಇಲ್ಲದಿದ್ದರೂ ಇನ್ನು ಮುಂದೆ ವಾಟ್ಸಾಪ್ ಬಳಸಬಹುದು!
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮಾಲಿಕತ್ವದ ವಾಟ್ಸಾಪ್ ಇದೀಗ ಹೊಸ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರ ತಂದಿದೆ. ಈ ವೈಶಿಷ್ಟ್ಯವು ವಾಟ್ಸಾಪ್ ವೆಬ್ ಗೆ ಅನ್ವಯವಾಗಲಿದೆ. ವಾಟ್ಸಾಪ್ ಬಳಕೆದಾರರು ತಮ್ಮ ವಾಟ್ಸಾಪ್ ನ್ನು ಕಂಪ್ಯೂಟರ್ ನಲ್ಲಿ ಲಾಗಿನ್ ಆಗಲು ವಾಟ್ಸಾಪ್ ವೆಬ್ ಸಹಾಯ ಮಾಡುತ್ತದೆ. ಆದರೆ, ಕಂಪ್ಯೂಟರ್ ಹಾಗೂ ಮೊಬೈಲ್ ಎರಡದಲ್ಲೂ ಇಂಟರ್ ನೆಟ್ ಇದ್ದಾಗ ಮಾತ್ರವೇ ವಾಟ್ಸಾಪ್ ವೆಬ್ ಕಾರ್ಯಾಚರಿಸುತ್ತಿತ್ತು.
ಇದೀಗ ವಾಟ್ಸಾಪ್ ವೆಬ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಈ ವೈಶಿಷ್ಟ್ಯವು ವಾಟ್ಸಾಪ್ ನ ಆಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಆವೃತ್ತಿಗಳಲ್ಲಿ ಬಳಕೆದಾರರಿಗೆ ಹೊರತರುತ್ತಿದೆ. ಈ ಹೊಸ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಆನ್ ಲೈನ್ ಇಲ್ಲದೆ ಮತ್ತೊಂದು ಉಪಕರಣದಲ್ಲಿ (ಉದಾಹರಣೆಗೆ ಕಂಪ್ಯೂಟರ್, ಅಥವಾ ವಾಟ್ಸಾಪ್ ವೆಬ್) ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ.
ಈ ಹಿಂದೆ ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟರ್ ನೆಟ್ ಇದ್ದರೆ ಮಾತ್ರವೇ ವಾಟ್ಸಾಪ್ ವೆಬ್ ಕೆಲಸ ಮಾಡುತ್ತಿತ್ತು. ಆದರೆ ಇನ್ನುಮುಂದೆ. ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟರ್ ನೆಟ್ ಇಲ್ಲವಾದರೂ, ಕಂಪ್ಯೂಟರ್ ನಲ್ಲಿ ನೇರವಾಗಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗುತ್ತದೆ.
ಈ ಹೊಸ ಫೀಚರ್ ಇನ್ನೂ ಬೀಟಾ ಹಂತದಲ್ಲಿದೆ. ವಾಟ್ಸಾಪ್ ನಲ್ಲಿನ ಲಿಂಕ್ಡ್ ಡಿವೈಸಸ್ ಸೆಟ್ಟಿಂಗ್‌ನಿಂದ ಬೀಟಾ ಎಂದು ಲೇಬಲ್ ಮಾಡಲಾದ ವೈಶಿಷ್ಟ್ಯವನ್ನು ಬಳಕೆದಾರರು ಆಯ್ಕೆ ಮಾಡಬೇಕಾಗುತ್ತದೆ. ಈ ಬಾರಿ, ನಿಮ್ಮ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಆಫ್‌ಲೈನ್ ಗೆ ಹೋದ ನಂತರ 14 ದಿನಗಳವರೆಗೆ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka