ಐಪಿಎಲ್ ಗೆ ಅತೀ ಹೆಚ್ಚು ವೀಕ್ಷಕರು ಇರುವ ರಾಜ್ಯ ಯಾವುದು? - Mahanayaka
7:03 PM Wednesday 11 - December 2024

ಐಪಿಎಲ್ ಗೆ ಅತೀ ಹೆಚ್ಚು ವೀಕ್ಷಕರು ಇರುವ ರಾಜ್ಯ ಯಾವುದು?

ipl
28/03/2022

ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿರುವ ಶ್ರೀಮಂತರ ಕ್ರಿಕೆಟ್ ಲೀಗ್ ಭಾರತೀಯ ಪ್ರೀಮಿಯರ್ ಲೀಗ್ (lPL)ಈ ಬಾರಿಯ ಐಪಿಎಲ್ ಸೀಸನ್ ಪ್ರಾರಂಭವಾಗುವ ಮೊದಲೇ  ಬ್ರೋಡ್‌ ಕಾಸ್ಟಿಂಗ್ ಪಾರ್ಟ್‌ನರಾದ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಗೆ ಅತಿ ಹೆಚ್ಚು ವೀಕ್ಷಕರು ಯಾವ ರಾಜ್ಯದಿಂದ ಎಂಬ ಮಾಹಿತಿ ಹೊರಬಿಟ್ಟಿದೆ .

ಕರ್ನಾಟಕವೋ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಕೂಡ ಈ ಪಟ್ಟಿಯಲ್ಲಿ ಇಲ್ಲ. ಆದರೆ  ಕ್ರಿಕೆಟ್‌ ನ ಮೆಕ್ಕಾ ಎಂದೇ ಕರೆಯಲ್ಪಡುವ  ವಾಂಕಡೆ ಕ್ರೀಡಾಂಗಣ ಇರುವ ಮಹಾರಾಷ್ಟ್ರದಲ್ಲಿ  ಐಪಿಎಲ್‌ ಗೆ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಮಹಾರಾಷ್ಟ್ರದ ಈ ಐಪಿಎಲ್ ಪ್ರೇಮಕ್ಕೆ ಫಿದಾ ಆದ ಸ್ಟಾರ್ ಸ್ಪೋರ್ಟ್ಸ್ ಇನ್ನು ಮುಂದೆ ಇತರ ಸ್ಥಳೀಯ ಭಾಷೆಯಂತೆ ಮರಾಠಿಯಲ್ಲೂ  ಐಪಿಎಲ್ ಕಮೆಂಟರಿ ನೀಡಲು ನಿರ್ಧಾರ ಮಾಡಿದೆ. ಜೊತೆಗೆ ಗುಜರಾತ್ ಭಾಷೆಯಲ್ಲಿ ಕೂಡ ಈ ಬಾರಿಯ ಕಮೆಂಟರಿಯು ಲಭ್ಯವಿರುತ್ತದೆ .

ಮಾರ್ಚ್ 26 ಈ ಬಾರಿಯ  ಮೊದಲ ಐಪಿಎಲ್  ಸೀಸನ್ ಪ್ರಾರಂಭವಾಗಲಿದ್ದು,  ಹತ್ತು ತಂಡಗಳು ಆಡಲಿವೆ. ಈ ಹಿಂದಿನ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ , ಕೊಲ್ಕತ್ತಾ ನೈಟ್ ರೈಡರ್ಸ್  ಮಧ್ಯೆ ರಾತ್ರಿ 7:30ಕ್ಕೆ ವಾಂಕಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತೀರ್ಥ ಯಾತ್ರೆಯ ನೆಪದಲ್ಲಿ ಗಾಂಜಾ ಸಾಗಾಟ: ದಂಪತಿ ಸೇರಿದಂತೆ ನಾಲ್ವರು ಅರೆಸ್ಟ್

ಎಸೆಸೆಲ್ಸಿ ಪರೀಕ್ಷೆ: ಮೊದಲ ದಿನವೇ ಸಿಕ್ಕಿ ಬಿದ್ದ 6 ನಕಲಿ ವಿದ್ಯಾರ್ಥಿಗಳು

ಪರೀಕ್ಷಾ ಕೇಂದ್ರದಲ್ಲಿಯೇ ಹೃದಯಾಘಾತ: ವಿದ್ಯಾರ್ಥಿನಿ ಸಾವು

ಲಂಚದ ಆರೋಪ:  ನಾವೆಲ್ಲ ಈಶ್ವರಪ್ಪ ಜೊತೆಗಿದ್ದೇವೆ ಎಂದ ರೇಣುಕಾಚಾರ್ಯ!

ಇತ್ತೀಚಿನ ಸುದ್ದಿ