ಐಪಿಎಲ್ ಗೆ ಭರದ ಸಿದ್ದತೆ: 13 ವರ್ಷದ ಆಟಗಾರ ವೈಭವ್ ಸೂರ್ಯವಂಶಿ‌‌ ಮೇಲೆ ಎಲ್ಲರ ಕಣ್ಣು - Mahanayaka
12:21 PM Sunday 22 - December 2024

ಐಪಿಎಲ್ ಗೆ ಭರದ ಸಿದ್ದತೆ: 13 ವರ್ಷದ ಆಟಗಾರ ವೈಭವ್ ಸೂರ್ಯವಂಶಿ‌‌ ಮೇಲೆ ಎಲ್ಲರ ಕಣ್ಣು

18/11/2024

ಮುಂದಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಾಗಿ ಸಿದ್ಧತೆ ಆರಂಭಗೊಂಡಿದೆ. ವೈಭವ್‌ ಸೂರ್ಯವಂಶಿ ಎಂಬ 13 ವರ್ಷದ ಬಾಲಕ ಯಾವ ಟೀಮ್ ಸೇರಲಿದ್ದಾನೆ ಎಂಬ ಕುತೂಹಲ ಸೃಷ್ಟಿಯಾಗಿದೆ. ನ.24, 25ರಂದು ಸೌದಿ ಅರೇಬಿಯಾದಲ್ಲಿ ನಡೆಯುವ ಮೆಗಾ ಹರಾಜಿಗಾಗಿ ನೋಂದಾಯಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿಯ ಹೆಸರು ಕೂಡ ಇದೆ.

ಬಿಹಾರದ ವೈಭವ್ ಸೂರ್ಯವಂಶಿ ಯುಎಇಯಲ್ಲಿನ ಡೆಯಲಿರುವ ಮುಂಬರುವ 2024ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಂಡರ್-19 ಏಷ್ಯಾಕಪ್‌ ಗಾಗಿ ಭಾರತ ಅಂಡರ್-19 ಭಾರತ ತಂಡದಲ್ಲಿ ಇತ್ತೀಚೆಗೆ ಸ್ಥಾನ ಪಡೆದಿದ್ದರು. ಐಪಿಎಲ್‌ ಲೀಗ್‌ನ ಇತಿಹಾಸದಲ್ಲಿ ಹರಾಜಿಗಾಗಿ ತನ್ನನ್ನು ನೋಂದಾಯಿಸಿಕೊಂಡ ಯುವ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ.

ಮೆಗಾ ಹರಾಜಿನಲ್ಲಿ 13ರ ಸೂರ್ಯವಂಶಿಗೆ ಯಾವುದೇ ತಂಡ ಬಿಡ್‌ ಮಾಡುತ್ತದೋ ಇಲ್ಲವೋ, ಇನ್ನೂ ನೋಡಬೇಕಾಗಿದೆ. ಆದರೆ ಅವರು ಈಗಾಗಲೇ ಟಿ 20 ಲೀಗ್‌ನ ಇತಿಹಾಸದ ಭಾಗವಾಗಿದ್ದಾರೆ.
2011 ರಲ್ಲಿ ಜನಿಸಿದ ವೈಭವ್ 4 ನೇ ವಯಸ್ಸಿನಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ತೋರಿಸಲು ಪ್ರಾರಂಭಿಸಿದ. ವೈಭವ್ ತಂದೆ ಸಂಜೀವ್ ಅವರ ಉತ್ಸಾಹವನ್ನು ಗಮನಿಸಿದರು. ಮನೆಯ ಬಳಿ ಮಗನಿಗಾಗಿ ಸಣ್ಣ ಆಟದ ಮೈದಾನ ನಿರ್ಮಿಸಿದ್ದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ