ಐ.ಪಿ.ಎಲ್. ಬೆಟ್ಟಿಂಗ್ ಆಡೋರಿಗೆ ಕವಿತೆ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು - Mahanayaka

ಐ.ಪಿ.ಎಲ್. ಬೆಟ್ಟಿಂಗ್ ಆಡೋರಿಗೆ ಕವಿತೆ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

ipl
23/03/2024

ಚಿಕ್ಕಮಗಳೂರು:  ಐ.ಪಿ.ಎಲ್. ಬೆಟ್ಟಿಂಗ್ ಆಡೋರಿಗೆ ಕವಿತೆ ಮೂಲಕ ಈ ಬಾರಿ ಪೊಲೀಸರು ಎಚ್ಚರಿಕೆ ನೀಡಿದ್ದು, ಈ ಕವಿತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೀಗಿದೆ ಕವಿತೆ:

ಬೆಟ್ಟಿಂಗ್ ಆಡಿ ಬಿಡ್ಬೇಡ್ರೋ ನಿಮ್ ಊರು
ಸಿಕ್ಕಾಂಕೊಂಡು ಕೆಡಿಸ್ಕೋಬೇಡಿ ನಿಮ್ ಹೆಸರು
ನಮ್ಮ ಕೈಗೆ ಸಿಕ್ರೆ ನಿಮ್ ಜೀವನ ಹುಷಾರು
ಈ ಸಲ ಕಪ್ ನಮ್ದೇ ಎಂಬ ಕೂಗು ಜೋರು
ಸುಮ್ನೆ ಆಟ ಎಂಜಾಯ್ ಮಾಡು ದೇವರು
ಅಭಿಮಾನಕ್ಕೆ ಹೆಸರು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು


Provided by

ಚಿಕ್ಕಮಗಳೂರು ಪೊಲೀಸರಿಂದ ಐ.ಪಿ.ಎಲ್. ಬೆಟ್ಟಿಂಗ್ ಕುರಿತು ಡಿಫರೆಂಟ್  ಆಗಿ, ಜನಸ್ನೇಹಿಯಾಗಿ ಜಾಗೃತಿ ಮೂಡಿಸಿದೆ. ಕವನದ ಮೂಲಕ ಬೆಟ್ಟಿಂಗ್  ವಿರುದ್ಧ ಜಾಗೃತಿ ಮೂಡಿಸಿದೆ.

ಪೊಲೀಸರ ಹೊಸ ರೀತಿಯ ಜಾಗೃತಿಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆರ್.ಸಿ.ಬಿ.ಯನ್ನ ಹೊಗಳುತ್ತಲೇ ಬೆಟ್ಟಿಂಗ್ ಚೋರರಿಗೆ ಬಿಸಿ ಮುಟ್ಟಿಸಿದ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ.  ಚಿಕ್ಕಮಗಳೂರು ಪೊಲೀಸರ ಕಳಕಳಿಯ ಅಭಿಯಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ