26 ದಿನಗಳಲ್ಲಿ 55 ಜನರಿಗೆ ಮರಣದಂಡನೆ ವಿಧಿಸಿದ ಇರಾನ್! - Mahanayaka

26 ದಿನಗಳಲ್ಲಿ 55 ಜನರಿಗೆ ಮರಣದಂಡನೆ ವಿಧಿಸಿದ ಇರಾನ್!

irain
28/01/2023

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ಮರಣದಂಡನೆಯ ಅಸ್ತ್ರವನ್ನು ಪ್ರಯೋಗಿಸಲಾಗಿದ್ದು, 2023 ವರ್ಷ ಆರಂಭವಾಗಿ ಕೇವಲ 26 ದಿನಗಳಲ್ಲಿ ಇರಾನ್ ಅಧಿಕಾರಿಗಳು 55 ಜನರನ್ನು ಗಲ್ಲಿಗೇರಿಸಿದೆ.

ಇರಾನ್ ನಲ್ಲಿ ಮರಣದಂಡನೆ ಶಿಕ್ಷೆ ನೀಡಿರುವ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹಿಜಾಬ್ ವಿರೋಧಿ ಹೋರಾಟಗಾರರು ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 55 ಜನರಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಇರಾನ್ ನ ಮಾನವ ಹಕ್ಕು ಸಂಸ್ಥೆಗಳು ಆರೋಪಿಸಿವೆ.

ಮರಣ ದಂಡನೆಗೆ ಒಳಪಟ್ಟ 55 ಜನರ ಪೈಕಿ ಮೂವರು ಯುವಕರನ್ನು ಕೇವಲ 18 ವರ್ಷ ವಯಸ್ಸಿನಲ್ಲೇ ಮರಣ ದಂಡನೆಗೆ ಒಳಪಡಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ತಿಳಿಸಿದೆ.
ಇರಾನ್ ನಲ್ಲಿ ಮರಣದಂಡನೆ ಶಿಕ್ಷೆ ಅತ್ಯಂತ ಮಾರಕವಾಗುತ್ತಿದ್ದು, ಇನ್ನೂ 107 ಜನರು ಮರಣದಂಡನೆ ಶಿಕ್ಷೆಗೊಳಪಡುವ ಸಾಧ್ಯತೆ ಇದೆ.

ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರಣದಂಡನೆ ಪ್ರಕರಣಗಳ ಬಗ್ಗೆ ಯಾರೂ ವಿರೋಧ ಮಾಡದ ಹಿನ್ನೆಲೆಯಲ್ಲಿ ಮರಣದಂಡನೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ ಎಂದು IHR ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ