ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ ಆಲ್ ರೌಂಡರ್  ಇರ್ಫಾನ್ ಪಠಾಣ್   - Mahanayaka
10:23 PM Tuesday 4 - February 2025

ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ ಆಲ್ ರೌಂಡರ್  ಇರ್ಫಾನ್ ಪಠಾಣ್  

17/11/2020

ನವದೆಹಲಿ: ಭಾರತದ ಮಾಜಿ ಆಲ್ ರೌಂಡರ್ ಕ್ರಿಕೆಟರ್ ಇರ್ಫಾನ್ ಪಠಾಣ್  ಅವರು ಶ್ರೀಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಶ್ರೀಲಂಕಾಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಫೋಟೋವೊಂದನ್ನು ಶೇರ್ ಮಾಡಿರುವ ಪಠಾಣ್  ಈ ಚಿತ್ರವು ಶ್ರೀಲಂಕಾದ ಪ್ರಯಾಣವನ್ನು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾ ಪ್ರೀಮಿಯರ್ ಲೀಗ್‌ ನಲ್ಲಿ ಕ್ಯಾಂಡಿ ಟಸ್ಕರ್ಸ್ ತಂಡದಲ್ಲಿ ಇರ್ಫಾನ್ ಪಠಾಣ್ ಆಡಲಿದ್ದಾರೆ. ಈ ತಂಡದಲ್ಲಿ  ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ಶ್ರೀಲಂಕಾದ ಕುಶಾಲ್ ಪೆರೆರಾ, ಕುಶಾಲ್ ಮೆಂಡಿಸ್ ಮತ್ತು ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಇದ್ದಾರೆ.

ಇರ್ಫಾನ್ ಪಠಾಣ್ ಭಾರತಕ್ಕಾಗಿ 120 ಏಕದಿನ, 29 ಟೆಸ್ಟ್ ಮತ್ತು 24 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇರ್ಫಾನ್ ಪಠಾಣ್ ಭಾರತ ಕ್ರಿಕೆಟ್ ತಂಡದಲ್ಲಿ ಬಹಳ ಜನಪ್ರಿಯವಾದ ಹೆಸರು, ಇವರ ಸಹೋದರ ಯೂಸೂಫ್ ಪಠಾಣ್ ಕೂಡ ಅತ್ಯುತ್ತಮ ಆಟಗಾರರಾಗಿದ್ದಾರೆ.



ಇತ್ತೀಚಿನ ಸುದ್ದಿ