H.D ಕುಮಾರಸ್ವಾಮಿಗಾಗಿ ಬಿಜೆಪಿ ಕಾಯುತ್ತಿದೆಯಾ: ವಿ.ಸುದರ್ಶನ್
ಚಾಮರಾಜನಗರ: ಇನ್ನೂ ಕೂಡ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ, ಕುಮಾರಸ್ವಾಮಿ ಅವರಿಗೆನಾದರೂ ಕಾಯುತ್ತಿದ್ದೀರಾ ಎಂದು ಕೈ ಮುಖಂಡ ವಿ.ಸುದರ್ಶನ್ ಲೇವಡಿ ಮಾಡಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ವಿಪಕ್ಷ ನಾಯಕನ್ನಾಗಿ ಘೋಷಣೆ ಮಾಡಲು ಹೈಕಮಾಂಡ್ ಕಾಯುತ್ತಿದ್ದೆಯಾ.? ಅದನ್ನಾದರೂ ಬಹಿರಂಗವಾಗಿ ಹೇಳಲಿ ಎಂದು ಕುಟುಕಿದರು.
ಪ್ರಜಾಸತ್ತಾತ್ಮಕವಾಗಿ ಸಿಎಂ ಆಯ್ಕೆ ಮಾಡಲು 3 ದಿನ ತಡವಾದದ್ದಕ್ಕೆ ಬಿಜೆಪಿ ಅವರು ಎಷ್ಟು ಟೀಕೆ ಮಾಡಿದರು. ಆದರೆ, ಸಂಸದೀಯ ವ್ಯವಸ್ಥೆಯಲ್ಲಿ ಅತಿ ಮುಖ್ಯವಾಗಿರುವ ವಿಪಕ್ಷ ನಾಯಕನನ್ನೇ ಇನ್ನೂ ಆಯ್ಕೆ ಮಾಡಿಲ್ಲ, ರಾಜ್ಯದ ಜನರಿಗೆ ಎಲ್ಲಾ ಗೊತ್ತಿದೆ ಅದಕ್ಕೆ ಬಿಜೆಪಿಯನ್ನು ಸೋಲಿಸಿದ್ದಾರೆ, ಮುಂದೆ ಕೇಂದ್ರದಲ್ಲೂ ಹೊಸ ಪರ್ವ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw