ಚುನಾವಣೆ ಮುಗಿದ ಮೇಲೆ ಅಮುಲ್ ವಿಚಾರದ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲವೇ?
ಆಮ್ ಆದ್ಮಿ ಪಕ್ಷದ ಮುಖಂಡರಾದ ಬ್ರಿಜೇಶ್ ಕಾಳಪ್ಪ ಅವರು ನಂದಿನಿ ಹಾಗೂ ಅಮುಲ್ ನಡುವಿನ ಸಂಘರ್ಷದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮೂರನೇ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೊಸ ಉಪಾಯವನ್ನು ಜನರ ಮುಂದಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಬ್ರಿಜೇಶ್ ಕಾಳಪ್ಪ ಅವರು “ನಂದಿನಿ ಮತ್ತು ಅಮುಲ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಅಮಿತ್ ಶಾ ಈ ಹಿಂದೆ ಮಾತನಾಡಿದ್ದರು.
ಮೊದಲ ಬಾರಿಗೆ ಈ ರೀತಿಯ ಪರಿಸ್ಥಿತಿ ಉಂಟಾಗಿದೆ. ಇಂತಹ ದೊಡ್ಡ ನಿರ್ಧಾರಗಳನ್ನು ಮಾಡುವ ಮುನ್ನ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕು. ಈಗ ಲಕ್ಷಾಂತರ ಜನರು ಹಾಲನ್ನು ಕೆಎಂಎಫ್ ಕೊಡುತ್ತಿದ್ದಾರೆ. ಅದೇ ರೀತಿ ಖರೀದಿ ಕೂಡ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಈ ವಿಚಾರ ಬರಬಾರದಾಗಿತ್ತು ಎಂದರು.
ಈ ನಿರ್ಣಯ ದಿಂದ ಜನರಿಗೆ ಆಕ್ರೋಶ ಉಂಟಾಗಿದೆ.ಈಗ ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಆಗಿದ್ದು ಸ್ಟೇಟ್ ಬ್ಯಾಂಕ್ ಮೈಸೂರ್ ಕೂಡ ಈಗ ಇಲ್ಲ. ಅದೂ ವಿಲೀನ ಆಗಿ ಹೋಗಿದೆ. ಅದೇ ರೀತಿ ನಂದಿನಿಯನ್ನು ಮಾಯ ಮಾಡುವ ಕಾರ್ಯಕ್ರಮ ಕೇಂದ್ರ ಮಾಡುತ್ತಿದೆ. ನಾಳೆ ಲಾ ಅಂಡ್ ಆರ್ಡರ್ ಪರಿಸ್ಥಿತಿ ಬರಬಾರದು ಅಂದರೆ ಈ ಸಲಹೆಯನ್ನು ಸರ್ಕಾರ ಪಾಲಿಸಲೇ ಬೇಕು. ಈಗ ಈ ಚುನಾವಣೆ ಮುಗಿದ ಮೇಲೆ ಹೊಸ ಸರ್ಕಾರ ಬರುತ್ತದೆ. ಆಗ ಆ ಸರ್ಕಾರವೇ ಈ ಸಮಸ್ಯೆಯನ್ನು ಬಗೆಹರಿಸಲಿ ಎಂದಿದ್ದಾರೆ.
ಕೇಂದ್ರದ ಅಮುಲ್ ನ ನಿರ್ಧಾರ ಸದ್ಯಕ್ಕೆ ಪಕ್ಕಕ್ಕೆ ಇಡಿ. ಹೊಸ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ. ನಮ್ಮ ಮಾತನ್ನು ಮೀರಿ ಮುಂದಿನ ದಿನದಲ್ಲಿ ನಿರ್ಧಾರ ತೆಗೆದುಕೊಂಡರೆ ಲಾ ಅಂಡ್ ಆರ್ಡರ್ ಪರಿಸ್ಥಿತಿ ಉಂಟಾದರೆ ನೀವೇ ಜವಾಬ್ದಾರಿ” ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw