ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗನ ಮನೆಗೆ ದಾಳಿ ನಿಜವೇ?
ಬಾಂಗ್ಲಾ ದೇಶದ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಸುದ್ದಿ ಸುಳ್ಳು ಎನ್ನುವುದು ಇದೀಗ ತಿಳಿದು ಬಂದಿದೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಮನೆಯೊಂದಕ್ಕೆ ದಾಳಿ ಮಾಡಿ ಬೆಂಕಿ ಹಚ್ಚಿದ್ದು ನಿಜ, ಆದರೆ ಈ ಮನೆ ಲಿಟನ್ ದಾಸ್ ಅವರದ್ದಲ್ಲ. ಈ ಮನೆ ಪ್ರಸ್ತುತ ಶೇಖ್ ಹಸೀನಾ ಅವರ ಪಕ್ಷದ ಅವಾಮಿ ಲೀಗ್ ನ ಸಂಸದರಾಗಿರುವ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾಗೆ ಸೇರಿದೆ ಎಂದು ಹೇಳಲಾಗಿದೆ.
ಮುರ್ತಾಜಾ ಏಕೆ ತಮ್ಮೊಂದಿಗೆ ನಿಲ್ಲುತ್ತಿಲ್ಲ ಎಂಬ ಅಸಮಾಧಾನದಿಂದ ಪ್ರತಿಭಟನಾಕಾರರು ಈ ಕೃತ್ಯ ನಡೆಸಿದ್ದಾರೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನದ ನಂತರ, ಪ್ರತಿಭಟನಾಕಾರರು ಜೆಸ್ಸೋರ್ ನಲ್ಲಿ ಹೋಟೆಲ್ ಗೆ ಕೂಡ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಕನಿಷ್ಠ 8 ಮಂದಿ ಸುಟ್ಟು ಕರಕಲಾಗಿದ್ದು, 84 ಜನರು ಗಾಯಗೊಂಡಿದ್ದಾರೆ. ಜೆಸ್ಸೋರ್ ಜಿಲ್ಲೆಯ ಅವಾಮಿ ಲೀಗ್ ನ ಪ್ರಧಾನ ಕಾರ್ಯದರ್ಶಿ ಶಾಹೀನ್ ಚಕ್ಲದಾರ್ ಈ ಹೋಟೆಲ್ ಮಾಲೀಕರಾಗಿದ್ದರು.
ಇನ್ನೂ ಲಿಟನ್ ದಾಸ್ ಮನೆಗೆ ಬೆಂಕಿ ಹಚ್ಚಿ ದರೋಡೆ ಮಾಡಲಾಗಿದೆ ಎಂಬ ವದಂತಿಯನ್ನು ಬಾಂಗ್ಲಾದೇಶದ ಡೈಲಿ ನ್ಯೂಸ್ ಪೇಪರ್ ಗಳು ಅದೊಂದು ವದಂತಿ ಎಂದು ಬಣ್ಣಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: