ನಾನು ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಉದಾಹರಣೆ ಇದ್ಯಾ?: ಸಿ.ಟಿ.ರವಿ ಪ್ರಶ್ನೆ - Mahanayaka

ನಾನು ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಉದಾಹರಣೆ ಇದ್ಯಾ?: ಸಿ.ಟಿ.ರವಿ ಪ್ರಶ್ನೆ

c t ravi
05/12/2022

ಚಿಕ್ಕಮಗಳೂರು:  ಈ ಹಿಂದೆ ನನ್ನನ್ನು ಕುಡುಕ ಅಂತಾ ಹೇಳಿದ್ರು,  ನಾನು ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಇದ್ಯಾ ಎಂದು ಚಿಕ್ಕಮಗಳೂರಲ್ಲಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವನು ನಾನು. ಈ ರೀತಿಯ ಹೇಳಿಕೆ ಕಾಂಗ್ರೆಸ್ ನ ಮನಸ್ಥಿತಿಯನ್ನ ತೋರಿಸುತ್ತೆ. ತಾನು ಕಳ್ಳ ಪರರ ನಂಬ ಅನ್ನೋ ಮನಸ್ಥಿತಿ ಕಾಂಗ್ರೆಸ್ ನದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ಗಂಟೆ ತನಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದರು.


ADS

ಎಲ್ಲಾ ರೌಡಿಶೀಟರ್ ಗಳು ರೌಡಿಗಳಲ್ಲ ಅಂತಾ ಹೇಳಿದ್ದೆ!

ನಾನು ಎಲ್ಲಾ ರೌಡಿಶೀಟರ್ ಗಳು ರೌಡಿಗಳಲ್ಲ ಅಂತಾ ಹೇಳಿದ್ದೆ, ಆದ್ರೆ, ರೌಡಿಶೀಟರ್ ನಲ್ಲಿರೋ ಎಲ್ಲರಿಗೂ ಕ್ಲೀನ್ ಚಿಟ್ ನಾನು ಕೊಟ್ಟಿಲ್ಲ. ನಿಮ್ಮ ಪಕ್ಷದ ಆರ್.ವಿ ದೇವರಾಜ್, ಹರಿಪ್ರಸಾದ್ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಲಿ. ಸಾವಿರಾರು ಜನರನ್ನ ರಾಜಕೀಯ ಕಾರಣಕ್ಕೆ ರೌಡಿ ಶೀಟ್ ನಲ್ಲಿ ಸೇರಿಸ್ತಾರೆ.  ಅವರು ಯಾರೂ ರೌಡಿಗಳಾಗಿರುವುದಿಲ್ಲ, ಅಂತಹವರ ಬಗ್ಗೆ ಹೇಳಿದ್ದೇನೆ ಎಂದು ಅವರು ಹೇಳಿದರು.

ವೃತ್ತಿಯನ್ನೇ ಹಫ್ತಾ, ಬೆದರಿಕೆ ಮಾಡಿಕೊಂಡಿರೋರ ಬಗ್ಗೆ ನಾನೆಂದೂ ಕ್ಲೀನ್‌ಚಿಟ್ ಕೊಡಲ್ಲ. ರಾಜಕೀಯ ಕಾರಣಕ್ಕೆ ರೌಡಿ‌ಶೀಟರ್ ಸೇರಿಸಿರುವವರ ಬಗ್ಗೆ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.

ಗುಜರಾತಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತೆ:

ಗುಜರಾತಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತೆ. ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿ ಮತ್ತೆ ಬಿಜೆಪಿ ಅಧಿಕಾರ ಬರುತ್ತೆ ಎಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಚುನಾಚಣೆಯಲ್ಲಿ ತೆಗೆದುಕೊಂಡ ಸೀಟಿಗಿಂತ ಹೆಚ್ಚು ಸ್ಥಾನ ಬರುತ್ತೆ. ನಾಮ್ ಮತ್ತು ಕಾಮ್ ಇವೆರಡರ ಆಧಾರದಲ್ಲಿ ಜನ ಮತ ಹಾಕುತ್ತಾರೆ.  ಪ್ರಧಾನಿ ಮೋದಿ, ಗುಜರಾತ್ ಸರ್ಕಾರದ ಸಾಧನೆಗೆ ಜನರು ಮತ ಹಾಕ್ತಾರೆ ಎಂದರು.

ಚುನಾವಣಾ ಫಲಿತಾಂಶದಿಂದ ರಾವಣ ಯಾರು ರಾಮ ಯಾರು ಎನ್ನುವುದು ಗೊತ್ತಾಗುತ್ತೆ. ರಾಮ ಮತ್ತೆ ಗೆದ್ದು ಬರ್ತಾನೆ. ರಾಮನ ಹಿಂಬಾಲಿಸುವ ಪಕ್ಷ ಮತ್ತೆ ಗೆದ್ದೆ ಬರುತ್ತದೆ. ರಾವಣ ಶಕ್ತಿಗಳು ನಾಶವಾಗುತ್ತದೆ. ಖರ್ಗೆಯವರಿಗೆ ಚಿಂತೆ ಬೇಡ, ರಾವಣನ ನಾಶ ಶತಸಿದ್ಧ ಎಂದು ಸಿ.ಟಿ.ರವಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ